Thursday, August 11, 2022

Latest Posts

ಕೋವಿಡ್-19ಗೆ ಮಕ್ಕಳ ತಜ್ಞ ಡಾ. ಮಂಜುನಾಥ್ ಬಲಿ

ರಾಮನಗರ: ತಮ್ಮದೇ ಆದ ಸೇವೆಯಿಂದ ಗುರುತಿಸಿಕೊಂಡು ಸಾರ್ವಜನಿಕ ಆಸ್ಪತ್ರೆಗೆ ಕಳಸಪ್ರಾಯರಾಗಿದ್ದ ಮಕ್ಕಳ ತಜ್ಞ ಡಾ. ಮಂಜುನಾಥ್ ಇನ್ನು ನೆನಪು ಮಾತ್ರ ಎಂದು ಆರೋಗ್ಯಾಧಿಕಾರಿ ಡಾ.ವಿಜಯನರಸಿಂಹ ಕಂಬನಿ ಮಿಡಿದರು.
ಅವರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಕೋವಿಡ್‌ನಿಂದ ಮೃತಪಟ್ಟ ಡಾ.ಮಂಜುನಾಥ್‌ರವರ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದರು.
ಕಳೆದ ಎರಡು ಮೂರು ವರ್ಷಗಳಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಮಂಜುನಾಥ್‌ರವರು ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳ ಜೊತೆ ಹೊಂದಿದ್ದ ಅನ್ಯೂನ್ಯತೆ, ರೋಗಿಗಳನ್ನು ಮಾತನಾಡಿಸುವ ಕಾರ್ಯವೈಖರಿ, ಧೈರ್ಯ ತುಂಬುವುದು, ಆತ್ಮವಿಶ್ವಾಸ ತುಂಬುವ ಗುಣ ಎಲ್ಲರೂ ಮೆಚ್ಚುವಂತದ್ದು ಎಂದರು.
ಕೆಲ ದಿನಗಳ ಹಿಂದೆ ಕೋವಿಡ್‌ನಿಂದ ಬಳಲಿದ ಅವರನ್ನು ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಸಲಾಗಿತ್ತು. ಆದರೆ ಇಂದು ಅವರು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ವೃದ್ದಾಶ್ರಮಗಳು ಪುಣ್ಯ ಕ್ಷೇತ್ರಗಳಿದ್ದಂತೆ. ವೃದ್ದರ ದರ್ಶನ ದೇವರ ದರ್ಶನದಂತೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಅವರು ತಾಲ್ಲೂಕಿನ ದೇವರಹಳ್ಳಿ ಗ್ರಾಮದಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ವೃದ್ದಾಶ್ರಮದಲ್ಲಿ ಆಯೋಜನೆ ಮಾಡಲಾಗಿದ್ದ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಆಶ್ರಯದ ಆಶ್ರಮಕ್ಕೆ ದಿನಸಿ ಪರಿಕರ, ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ಮುಪ್ಪು ಎಂಬುದು ಮನುಷ್ಯನಿಂದ ಪ್ರಾರಂಭವಾಗಿ ಪ್ರಾಣಿ, ಪಕ್ಷಿ, ಜೀವ ಸಂಕುಲ, ಸಸ್ಯಕಾಶಿಗಳಿಗೂ ಭಗವಂತ ನೀಡಿರುವ ಕೊಡುಗೆಯಾಗಿದ್ದು, ಯಾವ ಯಾವ ಕಾಲಕ್ಕೆ ಏನು ಸ್ವೀಕಾರ ಮಾಡಬೇಕೆಂಬುದನ್ನು ಸ್ವೀಕಾರ ಮಾಡಬೇಕಾದದ್ದು ಅನಿವಾರ್ಯವಾಗಿದೆ ಎಂದರು.
ವಯೋವೃದ್ದರನ್ನು ಕೊನೆಗಾಲದಲ್ಲಿ ರಕ್ಷಣೆ ಮಾಡಿ ಆರೈಕೆ ಮಾಡಬೇಕಾದ ನಾವು ಮಾನವೀಯ ಸಂಬAಧಗಳ ಮೌಲ್ಯವನ್ನು ಮರೆಯುತ್ತಿದ್ದೇವೆ.ಇದೊಂದು ವಿನಾಶದ ಸಂಸ್ಕೃತಿಯ ಸಂಕೇತವಾಗಿದೆ. ನಮ್ಮನ್ನು ಪ್ರವರ್ಧಮಾನಕ್ಕೆ ತಂದವರನ್ನು ದೂರ ತಳ್ಳುವುದು ಸರಿಯೇ ಎಂದು ಖೇಧ ವ್ಯಕ್ತಪಡಿಸಿದರು.
ಬಾಳಿ ಬದುಕಿದ ಸೂರು, ತನ್ನವರಿಂದಲೇ ದೂರಾಗಿ ದಿಕ್ಕು ಕಾಣದ ಸ್ಥಿತಿಯಲ್ಲಿ ಸಾವೊಂದೇ ದಿಕ್ಕು ಎನ್ನುವ ಸಂದರ್ಭದಲ್ಲಿ ಬೀದಿಯಲ್ಲಿ ಬಿದ್ದ ಕಂದಮ್ಮನನ್ನು ಭಗವಂತನೇ ಕೈ ಹಿಡಿದಂತೆ ವೃದ್ದರನ್ನು ಜೋಪಾನ ಮಾಡಿ ಆರೈಕೆ ಮಾಡುತ್ತಿರುವ ಹರೀಶ್ ಹೆಗ್ಗಡೆ ರವರ ಸೇವೆ ತರ್ಕಕ್ಕೆ ಸಿಲುಕದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೃದ್ದಾಶ್ರಮಗಳನ್ನು ನಡೆಸುವುದು ಸಾಮಾನ್ಯದ ಕೆಲಸವಲ್ಲ. ನಮ್ಮ ಮನೆಯಲ್ಲಿ ವಯಸ್ಸಾದ ಅಜ್ಜ ಅಜ್ಜಿಯರನ್ನು ನೋಡಿಕೊಳ್ಳಲು ಮೂಗು ಮುರಿಯುವ ಸಂದರ್ಭದಲ್ಲಿ ೨೫ಕ್ಕೂ ಹೆಚ್ಚು ಅನಾಥ ವಯೋವೃದ್ದರನ್ನು ಆರೈಕೆ ಮಾಡುತ್ತಾ, ಅವರಿಗೆ ತಂದೆ ತಾಯಿ ಮಕ್ಕಳ ಪ್ರೀತಿ ವಾತ್ಸಲ್ಯ ನೀಡುವುದು ಸಾಮಾನ್ಯದ ವಿಚಾರವಲ್ಲ. ಉಳ್ಳವರು, ದಾನಿಗಳು, ಸಮಾಜ ಸೇವಕರು ಈ ರೀತಿಯ ಕಟು ಸತ್ಯದ ವೃದ್ದಾಶ್ರಮಗಳಿಗೆ ಬೆಳಕಾಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ವೃದ್ದಾಶ್ರಮದ ಹಾಗೂ ಟ್ರಸ್ಟ್ನ ಅಧ್ಯಕ್ಷ ನಾಗೇಶ್, ಒಂದು ಕೈಗಳಿಂದ ಚಪ್ಪಾಳೆ ಸಾಧ್ಯವಿಲ್ಲ. ಎರಡು ಕೈಗಳು ಸೇರಿದರೆ ಮಾತ್ರ ಚಪ್ಪಾಳೆಸಾಧ್ಯವಿಲ್ಲ ಎರಡು ಕೈಗಳು ಸೇರಿದರೆ ಮಾತ್ರ ಚಪ್ಪಾಳೆಯಾಗುವುದು.ಅದರಂತೆ ಪೂರ್ವಜನ್ಮದ ಪುಣ್ಯವೆಂಬAತೆ ಹರೀಶ್ ಹೆಗ್ಗಡೆ ರವರು ವೃದ್ದಾಶ್ರಮವನ್ನು ನಡೆಸುತ್ತಿರುವುದು ಸಾಹಸ ಎಂದರೆ ತಪ್ಪಾಗಲಾರದು ಎಂದರು.
ಸಾಕಷ್ಟು ವಯಸ್ಸಾಗಿರುವವರ ಆರೈಕೆ ಕಷ್ಟಸಾಧ್ಯವಾಗಿದೆ. ವೃದ್ದರ ಉಟೋಪಚಾg, ಅನಾರೋಗ್ಯಪೀಡಿತರ ಶುಶ್ರೂಷೆ, ಪ್ರತಿನಿತ್ಯ ಅವರ ಆರೋಗ್ಯದ ಮೇಲೆ ಗಮನ ಪ್ರತಿ ದಿನ ಆಹಾರದ ಗುಣಮಟ್ಟ ಹಾಗೂ ಎಲ್ಲಾ ರೀತಿಯಲ್ಲಿಯೂ ದಿನದ ೨೪ ತಾಸುಗಳು ಆಶ್ರಮದ ಕಡೆ ಗಮನ ಹರಿಸುವ ಹರೀಶ್ ಹೆಗ್ಗಡೆರವರ ವೃದ್ದರ ಪ್ರೇಮ ಮೆಚ್ಚುವಂತದ್ದು ಎಂದರು.
ಈ ಸಂದರ್ಭದಲ್ಲಿ ವೃದ್ದಾಶ್ರಮದ ರೂವಾರಿ ಹರೀಶ್ ಹೆಗ್ಗಡೆ, ಮನು, ಹರೀಶ್ ಹಾಗೂ ಹಲವಾರು ಮಂದಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss