ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡನ್ ಅವರು ಸೋಮವಾರ ಮೊದಲ ಕೋವಿಡ್-19 ಲಸಿಕೆ ಹಾಕಿಸಿಕೊಂಡಿದ್ದಾರೆ.
ಲಸಿಕೆ ಸುರಕ್ಷತೆಯನ್ನು ಅಮೆರಿಕ ನಾಗರಿಕರಿಗೆ ಸಾರುವ ನಿಟ್ಟಿನಲ್ಲಿ ಟಿವಿ ನೇರ ಪ್ರಸಾರದಲ್ಲಿ ಬಿಡನ್ ಲಸಿಕೆ ಹಾಕಿಸಿಕೊಂಡಿದ್ದು, ಕ್ರಿಸ್ಟಿಯಾನಾಕೇರ್ ಆಸ್ಪತ್ರೆಯ ನರ್ಸ್ ಒಬ್ಬರು ಫೈಝರ್ ಮತ್ತು ಬಯೋಎನ್ಟೆಕ್ ಅಭಿವೃದ್ಧಿ ಪಡಿಸಿರುವ ಕೋವಿಡ್ ಲಸಿಕೆಯನ್ನು ಅವರಿಗೆ ನೀಡಿದರು.
ಆರೋಗ್ಯ ಕಾರ್ಯಕರ್ತರಿಗಿಂತ ಮುನ್ನ ಲಸಿಕೆ ಸ್ವೀಕರಿಸಲು ನನಗೆ ಇಷ್ಟವಿಲ್ಲ ಆದರೆ, ಲಸಿಕೆ ಲಭ್ಯವಾಗುತ್ತಿದ್ದಂತೆ ಜನರು ಅದನ್ನು ಪಡೆಯಲು ಸಿದ್ಧರಿರಲಿ ಎಂಬ ಕಾರಣಕ್ಕಾಗಿ ನಾನು ಲಸಿಕೆ ಪಡೆದುಕೊಂಡಿದ್ದೇನೆ ಎಂದು ಬಿಡನ್ ಹೇಳಿದ್ದಾರೆ.