Latest Posts

ಕಾಸರಗೋಡು| ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿಯಿಂದ ಗೌರವ

ಕಾಸರಗೋಡು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಕರಸೇವೆಗಾಗಿ ತೆರಳಿದ್ದ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕುಟುಂಬ ಪ್ರಬೋಧನ್ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರ ಮನೆಗೆ ತೆರಳಿ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 149 ಪಾಸಿಟಿವ್ ಪ್ರಕರಣ ದೃಢ, 82 ಮಂದಿ ಗುಣಮುಖ, 10 ಬಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಕೊರೋನಾಗೆ 10 ಮಂದಿ ಬಲಿಯಾಗಿದ್ದು, 149 ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. 82 ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬುಧವಾರ ದೃಢಗೊಂಡ 149 ಪ್ರಕರಣಗಳ ಪೈಕಿ 64 ಮಂದಿಗೆ...

ಉಡುಪಿ ಜಿಲ್ಲೆಯಲ್ಲಿ ಬುಧವಾರ 173 ಜನರಿಗೆ ಕೊರೋನಾ ಪಾಸಿಟಿವ್ ದೃಢ: ಡಾ. ಸುಧೀರ್‌ಚಂದ್ರ ಸೂಡ

ಉಡುಪಿ: ಜಿಲ್ಲೆಯಲ್ಲಿ ಬುಧವಾರ 173 ಕೋವಿಡ್-19 ಸೋಂಕು ದೃಢ ಪ್ರಕರಣಗಳು ಪತ್ತೆಯಾಗಿವೆ. ಇವರಲ್ಲಿ 111 ಜನರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಾಣಿಸಿಲ್ಲ, ಉಳಿದ 62 ಮಂದಿಗೆ ರೋಗ ಲಕ್ಷಣಗಳಿವೆ ಎಂದು ಜಿಲ್ಲಾ ಆರೋಗ್ಯ...

ಕೋವಿಡ್-19 ಆರ್ಥಿಕ ಚೇತರಿಕಗೆ ಆತ್ಮ ನಿರ್ಭರ ಭಾರತ: ಸಂಸದ ಎ.ನಾರಾಯಣಸ್ವಾಮಿ

sharing is caring...!

ಚಿತ್ರದುರ್ಗ: ಕೊರೋನಾ ಹಿನ್ನೆಲೆಯಲ್ಲಿ ದೇಶದ ಆರ್ಥಿಕ ನಷ್ಟ ನಿವಾರಿಸುವ ಉದ್ದೇಶದಿಂದ ಹಾಗೂ ನವಭಾರತ ನಿರ್ಮಾಣದ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆತ್ಮ ನಿರ್ಭರ ಭಾರತ ಪ್ಯಾಕೇಜ್ ಘೋಷಿಸಿದ್ದಾರೆ. ಎಂಎಸ್‌ಎಂಇಗಳ ಅಭಿವೃದ್ಧಿಯ ದೃಷ್ಠಿಯಿಂದ ೧೬ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಸಂಸದ ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.
ಆತ್ಮ ನಿರ್ಭರ ಭಾರತದಡಿ ಘೋಷಿಸಲಾದ ವಿವಿಧ ಯೋಜನೆಗಳ ವಿವರ ಇಂತಿದೆ. ಸಣ್ಣ, ಅತೀಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳು: ಸಣ್ಣ, ಅತೀಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳಿಗೆ ಸಾಲ ನೀಡಲು ಮೂರು ಲಕ್ಷ ಕೋಟಿ ರೂಗಳನ್ನು ಮೀಸಲಿರಿಸಲಾಗಿದೆ. ಎಂಎಸ್‌ಎಂಇಗಳ ಒತ್ತಡ ಕಡಿಮೆ ಮಾಡುವುದಕ್ಕಾಗಿ ೨೦ ಸಾವಿರ ಕೋಟಿ ಕ್ರೇಡಿಟ್ ಗ್ಯಾರಂಟಿ ಸ್ಕೀಂನ್ನು ಜಾರಿಗೊಳಿಸಿದೆ. ಇದರಿಂದ ಸುಮಾರು ೨ ಲಕ್ಷ ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗಳಿಗೆ ಉಪಯೋಗವಾಗಲಿದೆ.
ಜಾಗತೀಕ ಮಾರುಕಟ್ಟೆ ನಿಷೇಧ: ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ೨೦೦ ಕೋಟಿ ಒಳಗಿನ ಹೂಡಿಕೆಗೆ ಜಾಗತಿಕ ಹೂಡಿಕೆದಾರರಿಗೆ ಅವಕಾಶವಿಲ್ಲ. ಸ್ವದೇಶಿ ಕೈಗಾರಿಕೆಗಳಿಗೆ ಉತ್ತಮ ಅವಕಾಶ ಕಲ್ಪಿಸಲಾಗಿದೆ.
ದೇಶದ ಆರ್ಥಿಕ ಬಿಕ್ಕಟ್ಟನ್ನು ಸುಧಾರಿಸಲು ಹಾಗೂ ಹಣಕಾಸು ವ್ಯಪಾರವನ್ನು ಪುನಶ್ಚೇತನಗೊಳಿಸಲು ಸರ್ಕಾರ ಕಾರ್ಮಿಕರು, ಕೈಗಾರಿಕೆಗಳು ಹಾಗೂ ವ್ಯಾಪಾರಿಗಳಿಗೆ ಮೂರು ತಿಂಗಳ ಇಪಿಎಫ್ ನೆರವು ನೀಡುವುದು. ದೇಶದಲ್ಲಿರುವ ೩.೬೭ ಲಕ್ಷ ಕಂಪನಿಗಳಲ್ಲಿ ದುಡಿಯುತ್ತಿರುವ ೭೨.೨೨ ಲಕ್ಷ ಕಾರ್ಮಿಕರಿಗೆ ೨೫೦೦ ಕೋಟಿ ರೂಗಳ ಆರ್ಥಿಕ ನೆರವು ದೊರೆಯುವುದು.
ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಸಾಲಖಾತರಿ ಯೋಜನೆ: ಕೇಂದ್ರ ಸರ್ಕಾರವು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಹಂತಹಂತವಾಗಿ ಸಾಲ ಖಾತರಿ ಯೋಜನೆ ಮೂಲಕ ೪೫ ಸಾವಿರ ಕೋಟಿ ರೂಗಳ ನೆರವು ನೀಡಿದೆ. ಈ ಯೋಜನೆಯು ೨೦೨೧ರ ಮಾರ್ಚ್ ೩೧ ರವೆರೆಗೆ ದೊರೆಯಲಿದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ: ಬಡವರಿಗೆ ಅನುಕೂಲವಾಗುವ ದೃಷ್ಠಿಯಿಂದ ಪ್ರಧಾನ ಮಂತ್ರಿ ಗರೀಬ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದರಡಿ ೭೦ ಕೋಟಿ ಬಡವರಿಗೆ ಉಚಿತ ಪಡಿತರ ಹಾಗೂ ೩೬ ಕೋಟಿ ಖಾತೆಗಳಿಗೆ ೬೪೫೦೦ ಕೋಟಿ ರೂಗಳನ್ನು ವರ್ಗಾವಣೆ ಮಾಡಿದೆ.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನಯೋಜನೆ : ಲಾಕ್‌ಡೌನ್ ಸಮಯದಲ್ಲಿ ದೇಶದ ಜನರು ಹಸಿವಿನಿಂದ ಬಳಲುಬಾರದು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದರಡಿ ಬಡ ಕುಟುಂಬಗಳಿಗೆ ಪ್ರತಿ ತಿಂಗಳು ೫ ಕೆ.ಜಿ. ಅಕ್ಕಿ ಅಥವಾ ಗೋದಿ, ೧ ಕೆ.ಜಿ. ಬೆಳೆ ನೀಡಲಾಗುತ್ತಿತ್ತು. ಈ ಯೋಜನೆಯನ್ನು ನವೆಂಬರ್ ಅಂತ್ಯದವರೆಗೆ ವಿಸ್ತರಿಸಲಾಗಿದೆ. ೮೦ ಕೋಟಿಗೂ ಅಧಿಕ ಕುಟುಂಬಗಳು ಇದರ ಪ್ರಯೋಜನ ಪಡೆದಿವೆ.
ಒಂದು ದೇಶ ಒಂದು ರೇಷನ್ ಕಾರ್ಡ್ ಯೋಜನೆ: ಹಲವು ರಾಜ್ಯದಲ್ಲಿರುವ ಪ್ರವಾಸಿ ಕಾರ್ಮಿಕರು ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ತಮ್ಮ ಪಾಲಿನ ಪಡಿತರವನ್ನು ಪಡೆದುಕೊಳ್ಳಲು ಈ ಯೋಜನೆ ಜಾರಿಗೊಳಿಸಲಾಗಿದೆ. ೨೦೨೧ರ ಮಾರ್ಚ್ ಅಂತ್ಯದೊಳಗೆ ದೇಶಾದಾದ್ಯಂತ ಈ ಯೋಜನೆ ಅನುಷ್ಠಾನಗೊಳಿಸಲಾಗುವುದು.
ನರೇಗಾ ಯೋಜನೆ : ನರೇಗಾ ಯೋಜನೆಯಡಿ ಕಾರ್ಮಿಕರನ್ನು ಉತ್ತೇಜಿಸುವ ಸಲುವಾಗಿ ೪೦ ಸಾವಿರ ಕೋಟಿ ರೂಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಅಲ್ಲದೆ ಕೂಲಿಕಾರ್ಮಿಕರು ದೈನಂದಿನ ವೇತನದಲ್ಲಿ ೨೦ ರೂ ಹೆಚ್ಚಳ ಮಾಡಲಾಗಿದೆ.
ಕಿಸಾನ್ ಕ್ರೇಡಿಟ್ ಕಾರ್ಡ್ : ದೇಶಾದ್ಯಂತ ಜೂನ್ ಅಂತ್ಯದವರೆಗೆ ರೈತರಿಗೆ ೭೦.೩೨ ಲಕ್ಷ ಕಿಸಾನ್ ಕ್ರೇಡಿಟ್ ಕಾರ್ಡ್ ವಿತರಿಸಲಾಗಿದೆ. ಮೀನುಗಾರರು, ಹೈನಗಾರಿಕೆಯಲ್ಲಿ ತೊಡಗಿರುವವರು ಸೇರಿದಂತೆ ಒಟ್ಟು ೨.೫ ಕೋಟಿ ಕೃಷಿಕರು ಇದರ ಪ್ರಯೋಜನ ಪಡೆದಿದ್ದಾರೆ.
ಕೃಷಿ ಮೂಲ ಸೌಕರ್ಯ ಅಭಿವೃದ್ಧಿ ನಿಧಿ : ದೇಶದ ಕೃಷಿ ಪರಿಸರ ಬದಲಾವಣೆ ಮತ್ತು ಅಗತ್ಯ ಇರುವ ಅಭಿವೃದ್ಧಿ ಕಾರ್ಯಗಳಿಗಾಗಿ ೧ ಲಕ್ಷ ಕೋಟಿ ಮೊತ್ತದ ಅಗ್ರಿ ಇನ್‌ಪ್ರ ಫಂಡ್ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಮಾರಾಟೋತ್ತರ ಬೆಳವಣಿಗೆ ಅಗತ್ಯ ಕ್ರಮಕೈಗೊಂಡಿದೆ.
ವಿಶೇಷ ಹಣಕಾಸು ನೆರವು: ಬೆಳೆಗಾರರ ಬೆಳೆಗಳ ಅವಶ್ಯಕತೆಗೆ ಅನುಗುಣವಾಗಿ ೩೦ ಸಾವಿರ ಕೋಟಿ ರೂಗಳ ವಿಶೇಷ ಹಣಕಾಸಿನ ನೆರವು ನೀಡುವಂತೆ ನಬಾರ್ಡ್‌ಗೆ ಸೂಚಿಸಲಾಗಿದೆ. ಜೂನ್ ಅಂತ್ಯದೊಳಗೆ ೨೪೫೮೬ ಕೋಟಿ ರೂಗಳನ್ನು ವಿತರಿಸಲಾಗಿದ್ದು, ದೇಶದ ಮೂರು ಕೋಟಿಗೆ ಅಧಿಕ ಸಣ್ಣ ಹಾಗೂ ಮಧ್ಯಮದ ಕೃಷಿಕರು ಇದರ ಸೌಲಭ್ಯ ಪಡೆದಿದ್ದಾರೆ.
ಪ್ರಧಾನ ಮಂತ್ರಿ ಮತ್ಸ್ಯಾ ಸಂಪಂದ ಯೋಜನೆ : ಈ ಯೋಜನೆಯಡಿ ಕೇಂದ್ರದಿಂದ ೯೪೦೭ ಕೋಟಿ ಹಾಗೂ ರಾಜ್ಯ ಸರ್ಕಾರ ೪೮೮೦ ಕೋಟಿ ರೂಗಳ ಹೂಡಿಕೆ ಮಾಡಿದ್ದು, ಉಳಿದ ೫೭೬೩ ಕೋಟಿ ಹಣವನ್ನು ಫಲಾನುಭವಿಗಳು ಭರಿಸಬೇಕು.
ಪಶುಸಂಗೋಪಾನಾ, ಮೂಲಸೌಕರ್ಯ ಅಭಿವೃದ್ಧಿ ನಿಧಿ : ಹೈನುಗಾರಿಕೆ ಮತ್ತು ಮಾಂಸ ಸಂಕ್ಷರಣಾ ಘಟಕ ಹಾಗೂ ಮೂಲಸೌಕರ್ಯಗಳ ಗುಣಮಟ್ಟ ವೃದ್ಧಿಗಾಗಿ ಜೂನ್ ೨೪ ರಂದು ಪಶುಸಂಗೋಪನಾ ಮೂಲಸೌಕರ್ಯ ಅಭಿವೃದ್ಧಿ ನಿಧಿ ಜಾರಿಗೊಳಿಸಲಾಗಿದೆ.
ಒಂದು ದೇಶ ಒಂದು ಮಾರುಕಟ್ಟೆ : ರೈತರು ತಾವು ಬೆಳೆದ ಬೆಳೆಯನ್ನು ಎಪಿಎಂಸಿ ಸೇರಿದಂತೆ ಯಾವುದೇ ಮಾರುಕಟ್ಟೆಯಲ್ಲಿ ಬೇಕಾದರೂ ಮಾರಾಟ ಮಾಡಬಹುದಾಗಿದೆ. ಇದಕ್ಕೆ ಯಾವುದೇ ತೆರಿಗೆ ಕಟ್ಟುವಂತಿಲ್ಲ.
ಭೌಗೋಳಿಕ ಮಾಹಿತಿ ವ್ಯವಸ್ಥೆ ಮೂಲಕ ಮ್ಯಾಪಿಂಗ್ ಮತ್ತು ಪ್ರಚಾರ: ೩೭೬ ಕೈಗಾರಿಕಾ ಪಾರ್ಕ್ ಮತ್ತು ವಿಶೇಷ ಆರ್ಥಿಕ ವಲಯಗಳನ್ನು ಜೆಐಐಎಸ್ ಮೂಲಕ ಗುರುತಿಸಲಾಗಿದೆ. ಹೂಡಿಕೆ ಮಾಡಲು ಮತ್ತು ಉತ್ತೇಜಿಸಲು ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಇದನ್ನು ಜಾರಿಗೊಳಿಸಲಾಗಿದೆ.
ಸೇನೆಯಲ್ಲಿ ದೇಶೀಯ ವಿನ್ಯಾಸ ಮತ್ತು ತಂತ್ರಜ್ಞಾನಕ್ಕೆ ಆದ್ಯತೆ: ಭಾರತೀಯ ಕೈಗಾರಿಕೆಗಳಿಂದ ರಕ್ಷಣಾ ವಲಯದ ಬಲವರ್ಧನೆಗಾಗಿ ೩೧೧೩೦ ಕೋಟಿ ರೂಗಳನ್ನು ಹೂಡಿಕೆ ಮಾಡಿ ದೇಶೀಯ ವಿನ್ಯಾಸ ಹಾಗೂ ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ದೇಶದ ಅಭಿವೃದ್ಧಿಗಾಗಿ ವೋಕಲ್ ಫಾರ್ ಲೋಕಲ್ ಮತ್ತು ಮೇಕಿನ್ ಇಂಡಿಯಾ ಅಡಿ ಸ್ಥಳೀಯವಾಗಿ ಉತ್ಪಾದಿಸಲಾಗದ ವಸ್ತುಗಳನ್ನು ಉಪಯೋಗಿಸಿ ಮತ್ತು ಅವುಗಳನ್ನು ಪ್ರಪಂಚದ ಮಟ್ಟಕ್ಕೆ ಬ್ರಾಡಿಂಗ್ ಮಾಡಬೇಕಾಗಿದೆ ಹಾಗಾಗಿ ಆತ್ಮ ನಿರ್ಭರ ಭಾರತ ಅಭಿಯಾನಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಸಂಸದ ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.

Latest Posts

ಕಾಸರಗೋಡು| ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿಯಿಂದ ಗೌರವ

ಕಾಸರಗೋಡು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಕರಸೇವೆಗಾಗಿ ತೆರಳಿದ್ದ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕುಟುಂಬ ಪ್ರಬೋಧನ್ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರ ಮನೆಗೆ ತೆರಳಿ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 149 ಪಾಸಿಟಿವ್ ಪ್ರಕರಣ ದೃಢ, 82 ಮಂದಿ ಗುಣಮುಖ, 10 ಬಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಕೊರೋನಾಗೆ 10 ಮಂದಿ ಬಲಿಯಾಗಿದ್ದು, 149 ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. 82 ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬುಧವಾರ ದೃಢಗೊಂಡ 149 ಪ್ರಕರಣಗಳ ಪೈಕಿ 64 ಮಂದಿಗೆ...

ಉಡುಪಿ ಜಿಲ್ಲೆಯಲ್ಲಿ ಬುಧವಾರ 173 ಜನರಿಗೆ ಕೊರೋನಾ ಪಾಸಿಟಿವ್ ದೃಢ: ಡಾ. ಸುಧೀರ್‌ಚಂದ್ರ ಸೂಡ

ಉಡುಪಿ: ಜಿಲ್ಲೆಯಲ್ಲಿ ಬುಧವಾರ 173 ಕೋವಿಡ್-19 ಸೋಂಕು ದೃಢ ಪ್ರಕರಣಗಳು ಪತ್ತೆಯಾಗಿವೆ. ಇವರಲ್ಲಿ 111 ಜನರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಾಣಿಸಿಲ್ಲ, ಉಳಿದ 62 ಮಂದಿಗೆ ರೋಗ ಲಕ್ಷಣಗಳಿವೆ ಎಂದು ಜಿಲ್ಲಾ ಆರೋಗ್ಯ...

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಕೊರೋನಾ ಪಾಸಿಟಿವ್ ದೃಢ

ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಸಿಎಂ ಯಡಿಯೂರಪ್ಪ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದರಿಂದ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಬೆಂಗಳೂರಿನಲ್ಲಿ ಸಿಎಂ ಜೊತೆಗಿದ್ದ ಹರೀಶ್ ಪೂಂಜಾ ಅವರು ಸಿಎಂಗೆ...

Don't Miss

ಕಾಸರಗೋಡು| ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿಯಿಂದ ಗೌರವ

ಕಾಸರಗೋಡು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಕರಸೇವೆಗಾಗಿ ತೆರಳಿದ್ದ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕುಟುಂಬ ಪ್ರಬೋಧನ್ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರ ಮನೆಗೆ ತೆರಳಿ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 149 ಪಾಸಿಟಿವ್ ಪ್ರಕರಣ ದೃಢ, 82 ಮಂದಿ ಗುಣಮುಖ, 10 ಬಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಕೊರೋನಾಗೆ 10 ಮಂದಿ ಬಲಿಯಾಗಿದ್ದು, 149 ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. 82 ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬುಧವಾರ ದೃಢಗೊಂಡ 149 ಪ್ರಕರಣಗಳ ಪೈಕಿ 64 ಮಂದಿಗೆ...

ಉಡುಪಿ ಜಿಲ್ಲೆಯಲ್ಲಿ ಬುಧವಾರ 173 ಜನರಿಗೆ ಕೊರೋನಾ ಪಾಸಿಟಿವ್ ದೃಢ: ಡಾ. ಸುಧೀರ್‌ಚಂದ್ರ ಸೂಡ

ಉಡುಪಿ: ಜಿಲ್ಲೆಯಲ್ಲಿ ಬುಧವಾರ 173 ಕೋವಿಡ್-19 ಸೋಂಕು ದೃಢ ಪ್ರಕರಣಗಳು ಪತ್ತೆಯಾಗಿವೆ. ಇವರಲ್ಲಿ 111 ಜನರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಾಣಿಸಿಲ್ಲ, ಉಳಿದ 62 ಮಂದಿಗೆ ರೋಗ ಲಕ್ಷಣಗಳಿವೆ ಎಂದು ಜಿಲ್ಲಾ ಆರೋಗ್ಯ...
error: Content is protected !!