ಕಾಸರಗೋಡು : ಕೋವಿಡ್ 19 ಪ್ರತಿರೋಧ ಚಟುವಟಿಕೆಗಳ ಅವಲೋಕನ ನಡೆಸುವ ನಿಟ್ಟಿನಲ್ಲಿ ನೇಮಕಗೊಂಡಿರುವ ವಿಶೇಷ ಅಧಿಕಾರಿ ಅಲ್ಕೇಷ್ ಕುಮಾರ್ ಶರ್ಮ ಅವರು ಗಡಿಪ್ರದೇಶ ತಲಪ್ಪಾಡಿಗೆ ಭೇಟಿ ನೀಡಿದರು. ಸರಕು ಹೇರಿಕೊಂಡು ಜಿಲ್ಲೆಗೆ ಆಗಮಿಸುತ್ತಿರುವ ಲಾರಿಗಳ ಚಾಲಕರಿಗೆ ಭೋಜನ ಲಭ್ಯತೆ ಬಗ್ಗೆ ಅವರು ಪರಿಶೀಲನೆ ನಡೆಸಿದರು. ಟಾಲ್ ಪ್ಲಾಝಾದಲ್ಲಿ ಅವರು ಕರ್ನಾಟಕ ಪೆÇಲೀಸರೊಂದಿಗೆ ಮಾತುಕತೆ ನಡೆಸಿದರು. ಕುಂಬಳೆ, ಉಪ್ಪಳ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಇತರ ರಾಜ್ಯಗಳ ಕಾರ್ಮಿಕರಿಗೆ ಭೋಜನ ಸಹಿತ ಸೇವೆ ಲಭ್ಯತೆಯ ಬಗ್ಗೆ ಖಚಿತತೆ ನಡೆಸಿದರು.
ವಿದೇಶದಲ್ಲಿ ಸಾವು
ಕೊರೊನಾ ವೈರಸ್ ಸೋಂಕಿನಿಂದ ಕಣ್ಣೂರು ತಲಶ್ಶೇರಿ ಪಾನೂರು ಮೀತ್ತಲ ಪೂಕೋಂ ಇರಂಞÂ ಕುಳಂಗರ ಎಲ್.ಪಿ. ಶಾಲೆ ಬಳಿಯ ತೆಕ್ಕೆಕುಂಡಿಲ್ಲ ಸಾರಾಸ್ನ ಮುಹಮ್ಮದ್ ಅವರ ಪುತ್ರ ಶಬ್ನಾಸ್ (28) ಸಾವಿಗೀಡಾದರು.

ಮದಿನದ ಜರ್ಮನ್ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ಸಾವಿಗೀಡಾದರು. ಜನವರಿ 5 ರಂದು ಶಬ್ನಾಸ್ ಅವರ ವಿವಾಹವಾಗಿತ್ತು. ಮಾರ್ಚ್ 10 ರಂದು ಸೌದಿಗೆ ತೆರಳಿದ್ದರು.
ದಾರಾವಿಯಲ್ಲಿ ಸಾವು
ಮುಂಬೈಯ ದಾರಾವಿ ಕೊಳೆಗೇರಿ ಪ್ರದೇಶದಲ್ಲಿ ಗಾರ್ಮೆಂಟ್ ಯೂನಿಟ್ ನಡೆಸುತ್ತಿದ್ದ ಕೇರಳದ 56 ರ ಹರೆಯದ ವ್ಯಕ್ತಿಯೊಬ್ಬರು ಕೊರೊನಾ ವೈರಸ್ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ದೆಹಲಿಯ ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗವಹಿಸಿದ ನಾಲ್ವರು ಕೇರಳೀಯರು ಇವರನ್ನು ದಾರಾವಿಯಲ್ಲಿ ಸಂಪರ್ಕಿಸಿದ್ದರು. ಈ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ಸೋಂಕು ತಗಲಿದೆ ಎಂದು ಮುಂಬೈ ಪೆÇಲೀಸರು ತಿಳಿಸಿದ್ದು, ಈ ವ್ಯಕ್ತಿ ಯಾವ ಜಿಲ್ಲೆಗೆ ಸೇರಿದವರು ಎಂಬ ಬಗ್ಗೆ ಬಹಿರಂಗಪಡಿಸಿಲ್ಲ.