ಬಾಗಲಕೋಟೆ: ಕೋವಿಡ್-19 ಸೋಂಕು ಗುಲಬಾರ್ಗಾ ದಿಂದ ಬಂದಿರುವ ಶಂಕೆ ಇದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ಜಿ.ಪಂ.ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಬಾಗಲಕೋಟೆ ನಗರದಲ್ಲಿ ಕೋವಿಡ್-19 ಸೋಂಕು ಪೀಡಿತ ವ್ಯಕ್ತಿ ಸಾವನ್ನಪ್ಪಿದ ಸಂಬಂಧಿಕರಿಬ್ಬರಿಗೆ ಸೋಂಕು ದೃಢವಾಗಿದೆ.ಆದರೆ ಸೋಂಕುಪೀಡಿತ ವ್ಯಕ್ತಿ ಸಾವನ್ನಪ್ಪಿದ ಸಂಬಂಧಿಕ ಮಾರ್ಚ್ 15ರಂದು ರೈಲು ಮೂಲಕ ಗುಲಬಾರ್ಗಾ ಮಾರುಕಟ್ಟೆಗೆ ಭೇಟಿ ನೀಡಿದ್ದರು.ನಂತರ ಮಾರ್ಚ್ 16ವರೆಗೆ ಸಂಜೆ 4 ಗಂಟೆಯವರೆಗೆ ಅಲ್ಲಿಯ ಸಂಚಾರ ಮಾಡಿದ್ದಾರೆ.ಗುಲಬುಗರ್ಾದಲ್ಲಿ ಕೋವಿಡ್-19 ಸೋಂಕು ಪೀಡಿತ ಸಾವನ್ನಪ್ಪಿದ ಮನೆಯ ಅಕ್ಕಪಕ್ಕದ ಹೊಟೇಲ್ದಲ್ಲಿ ಉಳಿದಿದ್ದರಲ್ಲದೇ ಅಲ್ಲಿಯೇ ಊಟ,ವಾಸ್ತವ್ಯ ಹೂಡಿದ್ದರು.ನಂತರ ಮಾರ್ಚ್ 16ರಂದು ಸಂಜೆ ಬಸ್ ಮೂಲಕ ಬಾಗಲಕೋಟೆಗೆ ವಾಪಸ್ ಆಗಿದ್ದಾರೆ ಎಂದರು.
ಗುಲಬರ್ಗಾದಲ್ಲಿ ಇಬ್ಬರು ವ್ಯಾಪಾರಸ್ಥರೊಂದಿಗೆ ಒಂದು ದಿನ ಕಾಲ ಕಳೆದಿದ್ದಾರೆ.ಇವರೊಂದಿಗೆ ಯಾರ್ಯಾರು ಸಂಪರ್ಕದಲ್ಲಿದ್ದರು ಎಂಬುದನ್ನೆಲ್ಲಾ ಜಿಲ್ಲಾಡಳಿತ ತನಿಖೆ ನಡೆಸುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಮೂರು ವ್ಯಕ್ತಿಗಳಿಗೆ ಸೋಂಕು ಪಾಸಿಟಿವ್
ಬೇರೆ ಬೇರೆ ಕಡೆ ಗುಳೇ ಹೋದವರು ಮರಳಿ ಜಿಲ್ಲೆಗೆ ಬಂದವರು 21ಸಾವಿರ ಜನ ಇದ್ದಾರೆ.ಇನ್ನೂ ಹೊರರಾಜ್ಯದಿಂದ ಬಂದವರು 1700 ಜನ ಇದ್ದಾರೆ.ಇವರೆಲ್ಲರ ಮೇಲೆ ನಿಗಾ ಇಡಲಾಗಿದೆ. ಜಿಲ್ಲೆಯಲ್ಲಿ ಮೂರು ವ್ಯಕ್ತಿಗಳಿಗೆ ಸೋಂಕು ಪಾಸಿಟಿವ್ ಬಂದಿದ್ದು ಇದರಲ್ಲಿ ಓರ್ವ ವ್ಯಕ್ತಿ(70) ಸಾವನ್ನಪ್ಪಿದ್ದಾರೆ.73 ಜನರ ಸ್ಯಾಂಪಲ್ ಸಂಗ್ರಹ ಮಾಡಿದ್ದು ಇದರಲ್ಲಿ 23 ಜನ ಮಾದರಿ ನೆಗಟಿವ್ ಬಂದಿದೆ ಎಂದು ತಿಳಿಸಿದರು.
ಈಗಾಗಲೇ ಜಿಲ್ಲೆಯ ಜನ ಲಾಕ್ಡೌನ್ಗೆ ಉತ್ತಮ ಬೆಂಬಲ ಸೂಚಿಸಿದ್ದಾರೆ.ಜನರು ಮನೆಯಿಂದ ಯಾರೂ ಹೊರಬರಕೂಡದು.ಸಕರ್ಾರ ಎರಡು ತಿಂಗಳ ಪಡಿತರ ನೀಡಿದೆ.ಹಾಲು ನೀಡುತ್ತಿದೆ.ಇಷ್ಟೆಲ್ಲಾ ನೀಡಿದರೂ ಜನ ಹೊರಗಡೆ ಯಾಕೆ ಬರುತ್ತೀರಿ ಎಂದ ಅವರು 4,37,600 ಕಾರ್ಡಗಳಿಗೆ ಪಡಿತರ ನೀಡಲಾಗುತ್ತಿದೆ. 25,044 ಎಪಿಎಲ್ ಕಾರ್ಡ್ದಾ ರರಿಗೂ 15 ರೂ.ದರದಲ್ಲಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ ಎಂದರು.
ಕೃಷಿ ಸಚಿವ ಬಿ.ಸಿ.ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ,ಶಾಸಕ ವೀರಣ್ಣ ಚರಂತಿಮಠ,ಮುರಗೇಶ ನಿರಾಣಿ,ವಿ.ಪ.ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ,ಜಿ.ಪಂ.ಅಧ್ಯಕ್ಷೆ ಬಾಯಕ್ಕ ಮೇಟಿ,ಜಿಲ್ಲಾಧಿಕಾರಿ ಕ್ಯಾ.ರಾಜೇಂದ್ರ,ಎಸ್ಪಿ ಲೋಕೇಶ ಜಗಲಾಸಾರ್, ಸಿಇಓ ಗಂಗೂಬಾಯಿ ಮಾನಕರ ಇದ್ದರು.