Monday, July 4, 2022

Latest Posts

ಕೋವಿಡ್-19: ದೇಶದಲ್ಲಿ ಮೊದಲ ಬಾರಿಗೆ ಸಕ್ರಿಯ ಪ್ರಕರಣಗಳಿಗಿಂತ ಗುಣಮುಖರು ಹೆಚ್ಚು!

ಹೊಸದಿಲ್ಲಿ: ದೇಶದ ವಿವಿಧ ಕಡೆಗಳಲ್ಲಿ ಕೊರೋನಾ ವೈರಾಣು ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ, ಇದೇ ಮೊದಲ ಬಾರಿಗೆ ದೇಶದಲ್ಲಿ ಸಕ್ರಿಯ ಸೋಂಕು ಪ್ರಕರಣಗಳಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ.
ಬುಧವಾರ ಕಳೆದ ೨೪ಗಂಟೆಗಳಲ್ಲಿ ಹೊಸದಾಗಿ ೯೯೮೫ಪ್ರಕರಣಗಳು ವರದಿಯಾಗಿ ಒಟ್ಟು ಈ ವರೆಗೆ ದಾಖಲಾದ ಪ್ರಕರಣಗಳ (ವಿದೇಶಿಯರೂ ಸೇರಿ)ಸಂಖ್ಯೆ ೨,೭೬,೫೮೩ಕ್ಕೇರಿದೆ.ಈ ಪೈಕಿ ಮತ್ತೆ ೨೭೯ಮಂದಿ ಕೋವಿಡ್-೧೯ಕ್ಕೆ ಬಲಿಯಾಗುವುದರೊಂದಿಗೆ ಈ ವರೆಗೆ ಸಾವಿಗೀಡಾದವರ ಸಂಖ್ಯೆ ೭,೭೪೫ಕ್ಕೇರಿದೆ.ಇದೇ ವೇಳೆ ದೇಶದಲ್ಲಿ ಕೊರೋನಾ ಸಕ್ರಿಯ ಪ್ರಕರಣಗಳು ಅಂದರೆ ಚಿಕಿತ್ಸೆ ಪಡೆಯುತ್ತಿರುವ ಪ್ರಕರಣಗಳ ಸಂಖ್ಯೆ ೧,೩೩,೬೩೨ಆಗಿದ್ದರೆ, ಗುಣಮುಖರಾದವರ ಸಂಖ್ಯೆ ೧,೩೫, ೨೦೫ಕ್ಕೇರಿದೆ. ಈ ಮೂಲಕ ಗುಣಮುಖರಾಗುತ್ತಿರುವ ಪ್ರಕರಣಗಳ ಪ್ರಮಾಣ ಶೇ.೪೮.೯೯ಕ್ಕೇರಿದೆ.
ಸಾವಿನ ಸಂಖ್ಯೆಯ ನೆಲೆಯಲ್ಲಿ , ಭಾರತವೀಗ ಕೋವಿಡ್-೧೯ ತೀವ್ರ ಬಾತ ರಾಷ್ಟ್ರಗಳ ಸಾಲಿನಲ್ಲಿ ಅಮೆರಿಕ, ಬ್ರೆಜಿಲ್, ರಶ್ಯಾ ಮತ್ತು ಬ್ರಿಟನ್ ಬಳಿಕದ ಸ್ಥಾನದಲ್ಲಿದೆ.ಮಹಾರಾಷ್ಟ್ರವೊಂದರಲ್ಲೇ ಒಟ್ಟು ಪ್ರಕರಣಗಳ ಸಂಖ್ಯೆ ೯೦,೭೮೭ಕ್ಕೇರಿದ್ದರೆ, ತಮಿಳ್ನಾಡಿನಲ್ಲಿ ೩೪,೯೧೪, ಗುಜರಾತಿನಲ್ಲಿ ೨೧.೦೧೪, ಉತ್ತರ ಪ್ರದೇಶದಲ್ಲಿ ೧೧,೩೩೫, ರಾಜಸ್ತಾನದಲ್ಲಿ ೧೧,೨೪೫,ಮಧ್ಯಪ್ರದೇಶದಲ್ಲಿ ೯,೮೪೯, ಪ.ಬಂ.ದಲ್ಲಿ ೮,೯೮೫,ಕರ್ನಾಟಕದಲ್ಲಿ ೬೦೪೧, ಬಿಹಾರದಲ್ಲಿ ೫,೪೫೯, ಹರ್ಯಾಣದಲ್ಲಿ ೫,೨೦೯, ಆಂಧ್ರದಲ್ಲಿ ೫,೦೭೦, ಜಮ್ಮು-ಕಾಶ್ಮೀರದಲ್ಲಿ ೪,೩೪೬, ತೆಲಂಗಾಣದಲ್ಲಿ ೩,೯೨೦, ಒಡಿಶಾದಲ್ಲಿ ೩,೧೪೦,ಅಸ್ಸಾಮ್‌ನಲ್ಲಿ ೨,೯೩೭, ಪಂಜಾಬ್‌ನಲ್ಲಿ ೨,೭೧೯, ಕೇರಳದಲ್ಲಿ ೨,೦೯೬, ಉತ್ತರಾಖಂಡದಲ್ಲಿ ೧,೫೩೭, ಜಾರ್ಖಂಡ್‌ನಲ್ಲಿ ೧,೪೧೧, ಛತ್ತೀಸ್‌ಗಢದಲ್ಲಿ ೧,೨೪೦ ಕ್ಕೇರಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss