Thursday, August 18, 2022

Latest Posts

ಕೋವಿಡ್-19 ಪರೀಕ್ಷೆಗೆ ಇನ್ನು ರುಚಿ-ವಾಸನೆ ನಷ್ಟ ಪರಿಗಣನೆ: ಸರಕಾರ ಚಿಂತನೆ

ಹೊಸದಿಲ್ಲಿ:ಏಕಾಏಕಿಯಾಗಿ ರುಚಿ ಮತ್ತು ವಾಸನೆ ಗ್ರಹಣ ಶಕ್ತಿ ನಷ್ಟವಾಗುವುದು ಸೇರಿದಂತಹ ಲಕ್ಷಣಗಳನ್ನು ಇನ್ನು ಮುಂದೆ ಕೋವಿಡ್-೧೯ರ ಪರೀಕ್ಷೆಗಾಗಿ ಮಾನದಂಡವಾಗಿಸುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ ಎಂಬುದಾಗಿ ಮೂಲಗಳು ಶುಕ್ರವಾರ ತಿಳಿಸಿವೆ.
ದೇಶದಲ್ಲಿ ಕೊರೋನಾ ಸೋಂಕಿತರ ಒಟ್ಟು ಪ್ರಕರಣಗಳ ಸಂಖ್ಯೆ ೩ಲಕ್ಷದತ್ತ ದಾಪುಗಾಲಿಡುತ್ತಿದ್ದು,ಕೋವಿಡ್-೧೯ ರ ರಾಷ್ಟ್ರೀಯ ಕಾರ್ಯಪಡೆ ಶುಕ್ರವಾರ ನಡೆಸಿದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದು, ಇನ್ನೂ ಈ ಬಗ್ಗೆ ಒಮ್ಮತ ಮೂಡಿಲ್ಲವಾದರೂ ಈ ಬಗ್ಗೆ ಗಂಭೀರ ಚಿಂತನೆ ನಡೆದಿದೆ.ಕೆಲವು ಸದಸ್ಯರು, ಇಂತಹ ಒಂದು ಸಲಹೆಯನ್ನು ಮುಂದಿಟ್ಟಿದ್ದಾರೆ. ಅನೇಕ ರೋಗಿಗಳು , ಏಕಾಏಕಿಯಾಗಿ ರುಚಿ ನಷ್ಟವಾಗುವುದು ಮತ್ತು ವಾಸನಾ ಶಕ್ತಿ ನಷ್ಟವಾಗುತ್ತಿರುವುದಾಗಿ ತಿಳಿಸಿರುವ ಹಿನ್ನೆಲೆಯಲ್ಲಿ ಇಂತಹ ಒಂದು ಅಭಿಪ್ರಾಯ ವ್ಯಕ್ತವಾಗಿದ್ದು, ಕೋವಿಡ್-೧೯ಪರೀಕ್ಷೆಗೆ ಇದನ್ನು ಮಾನದಂಡವಾಗಿಸಬೇಕೆಂಬ ಸಲಹೆ ಮೂಡಿಬಂತು.
ಆದರೆ ಕೋವಿಡ್-೧೯ರ ಲಕ್ಷಣ ಭಿನ್ನ ಭಿನ್ನವಾಗಿರುತ್ತದೆ ಎಂಬುದಾಗಿ ತಜ್ಞರೊಬ್ಬರು ಬೊಟ್ಟು ಮಾಡಿದ್ದಾರೆ. ಕೆಲವರಿಗೆ ರುಚಿ-ವಾಸನೆ ನಷ್ಟವಾದರೆ, ಇನ್ನು ಕೆಲವರಿಗೆ ಜ್ವರ ಅಥವಾ ಶೀತಜ್ವರ ಬರುತ್ತದೆ.ಇದು ಒಂದು ಆರಂಭಿಕ ಲಕ್ಷಣವಾಗಿದ್ದು, ಈ ಲಕ್ಷಣ ಕಂಡುಬಂದ ಕೂಡಲೇ ಪರೀಕ್ಷೆ ಮಾಡಿದ್ದೇ ಆದರೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡಲು ಸಾಧ್ಯ. ಅಮೆರಿಕದ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯು ರೋಗನಿಯಂತ್ರಣ ಮತ್ತು ತಡೆ ಕ್ರಮಗಳಲ್ಲಿ ಇಂತಹ ಪರೀಕ್ಷಾ ಕೇಂದ್ರಗಳನ್ನು ತೆರೆದಿದ್ದು, ರೋಗ ಲಕ್ಷಣಗಳ ಪಟ್ಟಿಯಲ್ಲಿ ರುಚಿ ಮತ್ತು ವಾಸನಾ ನಷ್ಟವನ್ನೂ ಉಲ್ಲೇಖಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!