Wednesday, June 29, 2022

Latest Posts

ಕೋವಿಡ್-19 ಪರೀಕ್ಷೆ ಇಲ್ಲದೆ ಮೃತದೇಹ ಸಾಗಿಸುತ್ತಿದ್ದ ವಾಹನ: ವಾಪಸ್ ಕಳುಹಿಸಿದ ಚಿಕ್ಕಮಗಳೂರು ಗಡಿಯ ಚೆಕ್ ಪೋಸ್ಟ್ ಪೊಲೀಸರು

ಚಿಕ್ಕಮಗಳೂರು: ಕೊರೊನಾ ಪರೀಕ್ಷಾ ವರದಿ ಇಲ್ಲದೆ ಬೆಂಗಳೂರಿನಿಂದ ಸಾಗಿಸಲ್ಪಟ್ಟ ಶವವೊಂದನ್ನು ಚಿಕ್ಕಮಗಳೂರು ಗಡಿಯ ಚೆಕ್ ಪೋಸ್ಟ್ ಪೊಲೀಸರು ವಾಪಾಸ್ ಕಳಿಸಿದ ಪ್ರಸಂಗ ನಡೆದಿದೆ.

ಚಿಕ್ಕಮಗಳೂರು ಮೂಲದ ವ್ಯಕ್ತಿಯೊಬ್ಬರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದರು. ಅವರ ಮೃತ ದೇಹವನ್ನು ಸಂಬಂಧಿಕರು ಆಂಬುಲೆನ್ಸ್ ನಲ್ಲಿ ಚಿಕ್ಕಮಗಳೂರಿನ ಗಡಿಪ್ರದೇಶದ ಮಾಗಡಿ ಹ್ಯಾಂಡ್ ಪೋಸ್ಟ್ ಗೆ ತರುತ್ತಿದ್ದಂತೆ ಚೆಕ್ ಪೋಸ್ಟ್ ಪೊಲೀಸರು ತಡೆದು ಕೊರೊನಾ ಪರೀಕ್ಷಾ ವರದಿ ಇಲ್ಲದೆ ಶವವನ್ನು ನಗರಕ್ಕೆ ಕೊಂಡು ಹೋಗಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

ಮೃತರ ಸಂಬಂಧಿಕರು ಎಸ್ಪಿ ಹರೀಶ್ ಪಾಂಡೆ ಅವರನ್ನು ಸಂಪರ್ಕ ಮಾಡಿ ಮಾಹಿತಿ ನೀಡಿದಾಗ ಖುದ್ದು ಸ್ಥಳಕ್ಕೆ ತೆರಳಿದ ಎಸ್ಪಿ, ಕೊರೊನಾ ಪರೀಕ್ಷಾ ವರದಿ ಇಲ್ಲದೆ ನಗರ ಪ್ರವೇಶಕ್ಕೆ ಅನಿಮತಿ ಇಲ್ಲ ಎಂದು ಮನವರಿಕೆ  ಮಾಡಿದ ನಂತರ ಮೃತರ ಸಂಬಂಧಿಕರು ಶವವನ್ನು ವಾಪಾಸ್ ಬೆಂಗಳೂರಿಗೆ ಕೊಂಡೊಯ್ದಿದ್ದಾರೆ.

ಇತ್ತೀಚೆಗೆ ಮುಂಬೈನಿಂದ ಮಂಡ್ಯಕ್ಕೆ ಶವವೊಂದನ್ನು ಸಾಗಿಸಿದ ಪ್ರಕರಣ ವಿವಾದಕ್ಕೀಡಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss