Monday, August 15, 2022

Latest Posts

ಕೋವಿಡ್-19 ಲಕ್ಷಣ: ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಆಸ್ಪತ್ರೆಗೆ ದಾಖಲು

ಗುರುಗ್ರಾಮ: ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಅವರು ಕೋವಿಡ್-೧೯ರ ಲಕ್ಷಣಗಳೊಂದಿಗೆ ಗುರುವಾರ ಹರ್ಯಾಣದ ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಗೆ ದಾಖಲಾಗಿರುವುದಾಗಿ ಮೂಲಗಳು ತಿಳಿಸಿವೆ.
ಕೋವಿಡ್-೧೯ ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಪಾತ್ರ ಅವರು ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ಬಿಜೆಪಿಯ ವಕ್ತಾರರಾಗಿ ಅತ್ಯಂತ ಚಿರಪರಿಚಿತರು.ಅಲ್ಲದೆ ಅವರು ಸಾಮಾಜಿಕ ಮಾಧ್ಯಮಗಳ ಮೂಲಕವೂ ಖ್ಯಾತರಾಗಿದ್ದಾರೆ.ಗುರುವಾರವೂ ಅವರು ಹಲವು ಟ್ವೀಟ್‌ಗಳನ್ನು ಮಾಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss