Thursday, August 18, 2022

Latest Posts

ಕೋವಿಡ್ -19 ಸಾಂಕ್ರಾಮಿಕ ಪ್ರಕರಣಗಳಿಂದ ಮುಕ್ತವಾದ ಯುರೋಪಿನ ಮೊದಲ ದೇಶವಾಗಿ ಸ್ಲೋವೇನಿಯಾ!

ಲಜುಬ್ಲುಜಾನ (ಸ್ಲೋವೇನಿಯಾ): ಕೋವಿಡ್ -19 ಸಾಂಕ್ರಾಮಿಕ ಪ್ರಕರಣಗಳಿಂದ ಮುಕ್ತವಾದ ಯುರೋಪಿನ ಮೊದಲ ದೇಶ ತಾನೆಂದು ಸ್ಲೋವೇನಿಯಾ ಹೇಳಿಕೊಂಡಿದೆ.
20 ಲಕ್ಷ ಜನಸಂಖ್ಯೆಯ ಈ ಪರ್ವತೀಯ ದೇಶ ಇಟೆಲಿಯ ಜೊತೆ ಗಡಿಗಳನ್ನು ಹಂಚಿಕೊಂಡಿದೆ.
ಅಚ್ಚರಿ ಎಂದರೆ ಅಲ್ಲಿ ಹೊಸ ಕೊರೋನಾ ವೈರಾಣು ಪ್ರಕರಣಗಳು ಪತ್ತೆಯಾಗಿದ್ದರೂ ಅಲ್ಲಿನ ಸರಕಾರ ತನ್ನ ಕಾರ್ಯಚಟುವಟಿಕೆಗಳನ್ನು ಪುನರಾರಂಭಿಸಿದ್ದು, ಪ್ರಧಾನಿ ಜನೇಜ್ ಜನ್ಸಾ ಈ ಹೇಳಿಕೆ ನೀಡಿದ್ದಾರೆ.ಅಲ್ಲಿ 1500 ಕೋವಿಡ್-19 ಪ್ರಕರಣಗಳು ವರದಿಯಾಗಿ ಈ ಪೈಕಿ ೧೦೩ಮಂದಿ ಸಾವಿಗೀಡಾಗಿದ್ದರು. ಆದಾಗ್ಯೂ ಕೋವಿಡ್-19ರ ವಿರುದ್ಧದ ಕೆಲವು ಸಾಮಾನ್ಯ ಮತ್ತು ವಿಶೇಷ ನಿರ್ಬಂಧಗಳು ಮುಂದುವರಿಯಲಿದೆ . ಸಾರ್ವಜನಿಕವಾಗಿ ಜನ ಸೇರುವುದನ್ನು ಕಟ್ಟುನಿಟ್ಟಾಗಿ ನಿಷೇಸಲಾಗಿದೆ . ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಕಡ್ಡಾಯ ನಿಯಮವಾಗಿ ಮುಂದುವರಿಯಲಿದೆ ಎಂದೂ ಅವರು ಹೇಳಿದ್ದಾರೆ. ಕೆಲವು ಅಂಗಡಿ ಮಳಿಗೆಗಳು ಆರಂಭವಾಗಲಿದ್ದು, ಮೇ೨೩ರಿಂದ ಫುಟ್ಬಾಲ್ ಮತ್ತು ಇತರ ಸ್ಪರ್ಧೆಗಳು ಆರಂಭವಾಗಲಿವೆ ಎಂದು ಅವರು ತಿಳಿಸಿದ್ದಾರೆ. ಆದರೆ , ಅಲ್ಲಿ ಕೋವಿಡ್-19 ಇನ್ನೂ ಇದೆ ಎಂಬುದಾಗಿ ತಜ್ಞರು ಹೇಳಿದ್ದಾರೆ. ಯುರೋಪಿನ ಯಾವುದೇ ದೇಶವೂ ಈ ರೀತಿ ಘೋಷಿಸಿಲ್ಲ. ಆದ್ದರಿಂದ ಸ್ಲೋವೇನಿಯಾ ಕೂಡ ಎಚ್ಚರದಲ್ಲಿರಬೇಕು ಎಂದು ಕೊರೋನಾ ತಜ್ಞ ಮಾಟೇಜ ಲೋಗರ್ ಸಾರ್ವಜನಿಕ ಟಿವಿಯಲ್ಲಿ ಎಚ್ಚರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!