Wednesday, July 6, 2022

Latest Posts

ಕೋವಿಡ್-19 ಸೋಂಕು: ಪೊಲೀಸರ ತಲೆನೋವು ಕಡಿಮೆ ಮಾಡಲು ಉಡುಪಿಯ ಹುಡುಗನ ಆ್ಯಪ್!

ಉಡುಪಿ: ಸಾಂಕ್ರಮಿಕ ಕೋವಿಡ್-19 ಸೋಂಕು ಎಲ್ಲೆಡೆ ಹರಡುವುದನ್ನು ತಡೆಯಲು ಇಡೀ ದೇಶವನ್ನು ಸ್ತಬ್ಧಗೊಳಿಸಿ ಐದು ದಿನ ಆದರೂ ಅನಗತ್ಯವಾಗಿ ಮನೆ ಬಿಟ್ಟು ಹೊರಗೆ ಬರುವ ಜನರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಅಗತ್ಯ ವಸ್ತು ತೆಗೆದುಕೊಳ್ಳಲು ಬರುತ್ತಿರುವವರಿಗೂ ಪೊಲೀಸರು ಶಿಕ್ಷೆ ಕೊಡುವ ಸ್ಥಿತಿ ಎದುರಾಗಿದೆ. ಪೊಲೀಸರ ತಲೆನೋವನ್ನು ಕಡಿಮೆ ಮಾಡಲು ನಗರದ ಎಂಟೆಕ್ ಪದವೀಧರರೊಬ್ಬರು ಆ್ಯಪ್ ಸಿದ್ಧಪಡಿಸಿದ್ದಾರೆ.
ಮೈಸೂರು ಮಹಾರಾಜ ಇನ್ಸ್ಟಿಟ್ಯೂಟ್ ಆ್ ಟೆಕ್ನಾಲಜಿಯಲ್ಲಿ ಎಂಟೆಕ್ ಪದವಿ ಪೂರೈಸಿರುವ ಉಡುಪಿಯ ವಿಕ್ರಮ್ ಬಾಳಿಗ ಈ ಆ್ಯಪ್ ಸಿದ್ಧಪಡಿಸಿರುವ ಯುವಕ. ಡಿಸೈನಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ವಿಕ್ರಮ್ ಬಾಳಿಗ ಕೊರೋನಾ ಜಾಗೃತಿಗಾಗಿ ಮತ್ತು ಉಪಯೋಗಕ್ಕೆ ಪೊಲೀಸರು ಮತ್ತು ಸಾರ್ವಜನಿಕರಿಗಾಗಿ ಆ್ಯಪ್ ರೆಡಿ ಮಾಡಿದ್ದಾರೆ. ಕೊರೋನಾ ಸೇಫ್ಟಿ ಪೊಲೀಸ್ ಆ್ಯಪ್ ಕೇವಲ ಜಿಲ್ಲೆಗೆ ಮಾತ್ರವಲ್ಲದೇ ಇಡೀ ರಾಜ್ಯಕ್ಕೆ ಉಪಯೋಗವಾಗಲಿದೆ.

ಕೊರೋನಾ ಪಬ್ಲಿಕ್ ಸೇಫ್ಟಿ ಎಂದು ಆ್ಯಪ್‌ಗೆ  ಹೆಸರು ಕೊಟ್ಟಿದ್ದೇನೆ. ತುರ್ತು ಸಂದರ್ಭದಲ್ಲಿ ಅಗತ್ಯ ವಸ್ತುಗಳ ಪೂರೈಕೆ ಮಾಡುವ ಜನರಿಗೆ ಉಪಯೋಗ ಆಗಲಿ ಎಂಬುದು ಇದರ ಮುಖ್ಯ ಉದ್ದೇಶ. ಈ ಆ್ಯಪ್‌ನಿಂದ ಜನರಿಗೆ ಮತ್ತು ಪೊಲೀಸರಿಗೆ ಉಪಯೋಗ ಆಗಲಿದೆ. ಮನೆಯಿಂದ ಹೊರಡುವ ಮೊದಲು ಈ ಆ್ಯಪ್‌ನಲ್ಲಿ ವ್ಯಕ್ತಿ ತಾನು ಯಾವ ಉದ್ದೇಶದಿಂದ ಹೊರಗೆ ಹೋಗುತ್ತಿದ್ದೇನೆ ಎಂಬುದನ್ನು ನಮೂದಿಸಬೇಕು. ಪೊಲೀಸರಿಗೆ ರಿಕ್ವೆಸ್ಟ್ ಕಳುಹಿಸಬೇಕು. ಪೊಲೀಸರು ಅದನ್ನು ಓಕೆ ಮಾಡಿದರೆ ರಿಕ್ವೆಸ್ಟ್ ಕಳಿಸಿದ ವ್ಯಕ್ತಿ ಮನೆಯಿಂದ ಹೊರಡಬಹುದು. ಪೊಲೀಸರು ಓಕೆ ಮಾಡುವ ಅಥವಾ ರಿಜೆಕ್ಟ್ ಮಾಡುವ ಅವಕಾಶವನ್ನು ಕೂಡ ಈ ಆ್ಯಪ್‌ನಲ್ಲಿ ನೀಡಲಾಗಿದೆ.
ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡುವ ಸಂದರ್ಭ ನಮ್ಮ ೆನ್ ನಂಬರ್, ವಿಳಾಸ ಮತ್ತು ವಾಹನದ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಸುಳ್ಳು ಮತ್ತು ಬೇಕಾಬಿಟ್ಟಿ ಸುತ್ತಾಡುವ ಅವಕಾಶ ಇರುವುದಿಲ್ಲ. ಇಂತಿಷ್ಟೇ ಸಮಯದ ಒಳಗೆ ವಾಪಸ್ ಬರಬೇಕು ಎಂದು ಪೊಲೀಸರು ಸೂಚನೆ ಕೊಡುವ ಅವಕಾಶ ಇದರಲ್ಲಿದೆ. ಪೊಲೀಸರ ಬಳಿ ಕೂಡ ಸಂಚಾರದ ಸಂಪೂರ್ಣ ಮಾಹಿತಿಗಳು ಇದರಲ್ಲಿ ಅಡಕವಾಗಿರುತ್ತವೆ. ಇದು ಕೇವಲ ಕೋರೋನಾಗಾಗಿ ಅಲ್ಲ ಮುಂದಿನ ದಿನಗಳಲ್ಲೂ ಇದನ್ನು ಬಳಸಬಹುದು. ಸಮಾಜ ಸೇವಕರಿಗೆ ಆಸ್ಪತ್ರೆಯವರಿಗೆ ಆಹಾರವನ್ನು ಪೂರೈಕೆ ಮಾಡುವವರಿಗೆ ಎನ್‌ಜಿಒಗಳಿಗೆ ಇದು ಬಳಕೆ ಆಗಲಿದೆ. ಪೊಲೀಸರ ಮೇಲೆ ತಪ್ಪು ಭಾವನೆ ಬರಬಾರದು ಮತ್ತು ಸರಕಾರದ ಮೇಲೆ ಒತ್ತಡ ಕಮ್ಮಿ ಆಗಬೇಕು ಜನರ ಬಳಕೆಗೆ ಇದು ಉಪಯೋಗ ಆಗಬೇಕು ಅನ್ನುವ ಉದ್ದೇಶದಿಂದ ನಾನು ಮಾಡಿದ್ದೇನೆ ಎಂದು ವಿಕ್ರಮ್ ಬಾಳಿಗಾ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss