Wednesday, August 17, 2022

Latest Posts

ಕೋವ್ಯಾಕ್ಸಿನ್: ರೂ. 295/- (ಲೋಕಲ್ ಟ್ಯಾಕ್ಸ್ ಎಕ್ಸ್ಟ್ರಾ )!!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೇಂದ್ರ ಸರಕಾರ ಭಾರತ್​ ಬಯೋಟೆಕ್​​ನಿಂದ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಯನ್ನು ಪ್ರತಿ ಡೋಸ್​ಗೆ 295 ರೂ.( ತೆರಿಗೆ ಹೊರತುಪಡಿಸಿ) ಖರೀದಿಮಾಡಲಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್​ ಭೂಷಣ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು , ಈಗಾಗಲೇ ಸೆರಂ ಇನ್ಸ್​ಟಿಟ್ಯೂಟ್​ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನು 200 ರೂ.ಗೆ ಖರೀದಿ ಮಾಡಲಾಗಿದ್ದು, ಇಂದಿನಿಂದಲೇ ಎಲ್ಲಾ ರಾಜ್ಯಗಳಿಗೂ ಹಂಚಿಕೆಯಾಗಿವೆ.
ಇನ್ನು ಸೆರಂ ಇನ್ಸ್​ಟಿಟ್ಯೂಟ್​ನಿಂದ 110 ಲಕ್ಷ ಕೋವಿಶೀಲ್ಡ್ ವ್ಯಾಕ್ಸಿನ್​ ಡೋಸ್​​ ಹಾಗೂ ಭಾರತ್ ಬಯೋಟೆಕ್​ನಿಂದ 55 ಲಕ್ಷ ಡೋಸ್​ ಖರೀದಿ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಭಾರತ್​ ಬಯೋಟೆಕ್​ನಿಂದ 55 ಲಕ್ಷ ಡೋಸ್​ಗಳು ಜನವರಿ 14ರೊಳಗೆ ವಿವಿಧ ರಾಜ್ಯಗಳ 12 ಕೇಂದ್ರಗಳಿಗೆ ತಲುಪಲಿದ್ದು, ಮೊದಲ ಹಂತದಲ್ಲಿ 38.5 ಲಕ್ಷ ಹಾಗೂ ಎರಡನೇ ಹಂತದಲ್ಲಿ 16.5 ಲಕ್ಷ ವ್ಯಾಕ್ಸಿನ್​ ರವಾನೆಯಾಗಲಿವೆ. ಸೆರಂನಿಂದ ಖರೀದಿಯಾಗುತ್ತಿರುವ 1.1 ಕೋಟಿ ಡೋಸ್​ಗಳ ಬೆಲೆ 231 ಕೋಟಿ ಆಗಲಿದ್ದು, 4.5 ಕೋಟಿ ಡೋಸ್ ಖರೀದಿ ಮಾಡಲು ಕೇಂದ್ರ ನಿರ್ಧಾರ ಮಾಡಿರುವ ಕಾರಣ ಇದರ ಒಟ್ಟು ಬೆಲೆ 1,176 ಕೋಟಿ ರೂ. ಆಗಲಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!