ಹೊಸ ದಿಗಂತ ವರದಿ ಮೈಸೂರು:
ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಆದಿವಾಸಿಯೊಬ್ಬ ಕೌಬಾಯ್ ಉಡುಪು ತೊಟ್ಟು ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಳ್ಳಿ ಗುರುಪುರ ನಾಗಪುರ ಹಾಡಿ ನಿವಾಸಿ 51ರ ಹರೆಯದ ರಾಜು ಕೋಟ್ ಹಾಗೂ ಕೌ ಬಾಯ್ ಟೋಪಿ ಧರಿಸಿ ಮತದಾನ ಮಾಡಿದರು. ರಾಜು ದಂಪತಿ ತಮ್ಮ ಹಕ್ಕು ಚಲಾಯಿಸಿದ್ದೇವೆಂದು ಹೆಮ್ಮೆಯಿಂದ ಮತದಾನ ಮಾಡಿರುವ ಗುರುತು ತೋರಿಸಿದರು. ಹುಣಸೂರು ತಾಲೂಕಿನ ಹಾಡಿಗಳಲ್ಲಿ ಮಧ್ಯಾಹ್ನದ ವೇಳೆ ಮತದಾನ ಮತ್ತಷ್ಟು ಬಿರುಸುಗೊಂಡಿತ್ತು. ಗುರುಪುರ ನಾಗಪುರ ಆಶ್ರಮ ಶಾಲೆಗಳಲ್ಲಿ ಮತಗಟ್ಟೆ ಸ್ಥಾಪಿಸಲಾಗಿದ್ದು, ಹಕ್ಕು ಚಲಾಯಿಸಲು ಬರುವ ಪ್ರತಿಯೊಬ್ಬರಿಗೂ ಸ್ಯಾನಟೈಸರ್, ಥರ್ಮಲ್ ಸ್ಕೀನಿಂಗ್ ವ್ಯವಸ್ಥೆ ಮಾಡಲಾಗಿತ್ತು.