ಹೊಸದಿಗಂತ ಆನ್ಲೈನ್ ಡೆಸ್ಕ್:
ಅಮೆರಿಕದ ಸಂಸತ್ ಭವನದ ಮೇಲೆ ದಾಳಿ ನಡೆಸಿದ ಗಲಭೆಕೋರರ ವಿರುದ್ಧ ಎಫ್ಬಿಐ(ಫೆಡರಲ್ ಬ್ಯೂರೋ ಆಫ್ ಇನ್ಫಾರ್ಮೇಶನ್) 160ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ.
ಸುದ್ದಿಗಾರರೊಂದಿಗೆ ವಾಷಿಂಗ್ಟನ್ನ ಎಫ್ಬಿಐ ಅಧಿಕಾರಿ ಸ್ಟೀವನ್ ಎಂ. ಡಿ. ಆಂಟುವೊನೊ ಮಾತನಾಡಿದ್ದು, ಕ್ಯಾಪಿಟಲ್ ಮೇಲಿನ ದಾಳಿಯಲ್ಲಿ ಭಾಗವಹಿಸಿದ ಪ್ರತಿಭಟನಾಕಾರರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದರ ಬಗ್ಗೆ ಅಟರ್ನಿ ಕಚೇರಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುತ್ತಿದೆ ಎಂದಿದ್ದಾರೆ.