Tuesday, January 19, 2021

Latest Posts

ಕ್ಯಾಮರಾದಲ್ಲಿ ಸೆರೆಯಾಯಿತು ಪಂತ್‌ ʼಗಾರ್ಡ್‌ ಮಾರ್ಕ್‌ʼಅನ್ನು ಕಾಲಿನಿಂದ ಅಳಿಸಿದ ಸ್ಮಿತ್ ವರ್ತನೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್​​ ಪಂದ್ಯದ ವೇಳೆ ಆಸ್ಟ್ರೇಲಿಯಾ ಕೀಳುಮಟ್ಟದ ವರ್ತನೆ ತೋರಿದ್ದು, ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಎರಡನೇ ಸೆಷನ್​ ಸಮಯದ ವೇಳೆ ಡ್ರಿಂಕ್​ ಬ್ರೇಕ್​ ಬಿಡಲಾಗಿತ್ತು. ಈ ಸಂದರ್ಭ ಎಲ್ಲರೂ ತಂಪು ಪಾನೀಯ ಕುಡಿಯುವುದರಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ಕಳ್ಳ ಬೆಕ್ಕಿನಂತೆ ಸುಮ್ಮನೆ ಎಲ್ಲರ ಕಣ್ಣ ತಪ್ಪಿಸಿ ಸ್ಟಂಪ್​ ಬಳಿ ಬಂದ ಸ್ಟೀವ್​ ಸ್ಮಿತ್​, ರಿಷಬ್​ ಪಂತ್​ ಹಾಕಿದ್ದ ಬ್ಯಾಟಿಂಗ್​ ಗಾರ್ಡ್​ಅನ್ನು ಅಳಿಸಿ ಹಾಕಿದ್ದಾರೆ. ಬಳಿಕ ಅಲ್ಲಿಂದ ಸೈಲೆಂಟ್​ ಆಗಿ ಸ್ಥಳದಿಂದ ಕಾಲ್ಕಿತ್ತಿತ್ತಿದ್ದಾರೆ. ನಂತರ ಬಂದ ರಿಷಬ್​ ಪಂತ್​ ಮತ್ತೆ, ಬ್ಯಾಟಿಂಗ್​ ಗಾರ್ಡ್​ ಹಾಕಿಕೊಂಡಿದ್ದಾರೆ.
ಸ್ಮಿತ್​ ಮಾಡಿದ ಕೀಳುಮಟ್ಟದ ಕೆಲಸ ಸ್ಟಂಪ್​ ಕ್ಯಾಮೆರಾದಲ್ಲಿ ಸೆರಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಆಸ್ಟ್ರೇಲಿಯಾ ಕೀಳುಮಟ್ಟದ ಗಿಮಿಕ್​ಗೆ ವೀರೇದ್ರ ಸೆಹ್ವಾಗ್​ ಸಹ ಛೀಮಾರಿ ಹಾಕಿದ್ದಾರೆ. ಸ್ಮಿತ್​ ಮಾಡಿರುವ ಕೆಲಸದಿಂದ ಯಾವುದೇ ಪ್ರಯೋಜವಾಗಿಲ್ಲ ಎಂದು ಟೀಕೆ ಮಾಡಿದ್ದಾರೆ.
ಈ ಹಿಂದೆ ಬಾಲ್​ ಟ್ಯಾಂಪರಿಂಗ್​ ಪ್ರಕರಣದ ಜವಾಬ್ದಾರಿ ಹೊತ್ತು ಸ್ಟೀವ್​ ಸ್ಮಿತ್​ ಕ್ರಿಕೆಟ್​ನಿಂದ ಒಂದು ವರ್ಷ ಹೊರಗುಳಿದಿದ್ದರು. 2019ರ ವರ್ಲ್ಡ್​​ ಕಪ್​ಗೆ ಸ್ಮಿತ್​ ಮರಳಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!