Thursday, August 11, 2022

Latest Posts

ಕ್ಯಾಲಿಫೋರ್ನಿಯಾಗೆ ಭವಿಷ್ಯ ಹೇಳಿ ತನ್ನ ಜೇಬಿನಿಂದ ಲಕ್ಷಾಂತರ ಹಣ ಕಳೆದುಕೊಂಡ ಜ್ಯೋತಿಷಿ

ದಾವಣಗೆರೆ: ಗಿಫ್ಟ್ ಆಸೆಗೆ ಬಿದ್ದು ಜ್ಯೋತಿಷಿಯೊಬ್ಬರು 9.20 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕು ಗಡಿಮಾಕುಂಟೆಯಲ್ಲಿ ನಡೆದಿದೆ.
ಗ್ರಾಮದ ಜ್ಯೋತಿಷಿ, ಪೋಸ್ಟ್ ಮ್ಯಾನ್ ಆಗಿರುವ ವಿರೂಪಾಕ್ಷಯ್ಯ ಹಣ ಕಳೆದುಕೊಂಡವರು. ಅಮೇರಿಕಾ ಕ್ಯಾಲಿಫೋರ್ನಿಯಾದ ರಚೆಲ್ ಎಂಬಾತನಿಗೆ ಫೇಸ್‌ಬುಕ್‌ನಲ್ಲಿ ವಿರೂಪಾಕ್ಷಯ್ಯ ಭವಿಷ್ಯ ಹೇಳಿದ್ದರು. ನೀವು ಹೇಳಿದ ಭವಿಷ್ಯದಂತೆ ನನ್ನ ಜೀವನದಲ್ಲಿ ಎಲ್ಲ ಒಳ್ಳೆಯದಾಗಿದ್ದು ಅದಕ್ಕಾಗಿ ಗಿಫ್ಟ್ ನೀಡಲು ಪಾರ್ಸಲ್ ಚಾರ್ಜ್ ಕಳಿಸುವಂತೆ ರಚೆಲ್ ನಂಬಿಸಿದ್ದ. ಈ ಹಿನ್ನೆಲೆಯಲ್ಲಿ ರಚೆಲ್ ಬ್ಯಾಂಕ್ ಖಾತೆಗೆ 9.20 ಲಕ್ಷ ರೂ. ಜಮೆ ಮಾಡಿದ್ದ ವಿರೂಪಾಕ್ಷಯ್ಯ, ಮೋಸ ಹೋಗಿರುವುದು ಗೊತ್ತಾಗುತ್ತಿದ್ದಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss