Monday, July 4, 2022

Latest Posts

ಕ್ರಿಕೆಟ್ ಪ್ರೇಮಿಗಳಿಗೆ ಪೋಸ್ಟರ್, ಬ್ಯಾನರ್ ಪ್ರದರ್ಶಿಸಲು ಅವಕಾಶವಿಲ್ಲ.

ಅಸ್ಸಾಂ: ಟೀ ಇಂಡಿಯಾದ 2020ರ ಮೊದಲ ಪಂದ್ಯಕ್ಕೆ ಗುವಾಹಟಿಯ ಬಾರಸ್ಪರಾ ಕ್ರಿಕೆಟ್ ಆಟದ ಮೈದಾನ ಸಜ್ಜಾಗಿದೆ.

ಭಾರತ ಮತ್ತು ಶ್ರೀಲಂಕಾದ ವಿರುದ್ಧ ನಡೆಯುವ ಮೊದಲ ಟಿ ಟ್ವೆಂಟಿ ಪಂದ್ಯಕ್ಕೂ ಮುನ್ನ ಅಸ್ಸಾಂ ಕ್ರಿಕೆಟ್ ಮಂಡಳಿ ಪ್ರೇಕ್ಷಕರಿಗೆ ಕೆಲವು ನಿರ್ಬಂಧಗಳನ್ನು ಹೇರಿದೆ.

ಪಂದ್ಯ ವೀಕ್ಷಿಸಲು ಬರುವ ಪ್ರೇಕ್ಷಕರಿಗೆ ಪರ್ಸ್, ಮಹಿಳೆಯರ ಹ್ಯಾಂಡ್ ಬ್ಯಾಗ್, ಮೊಬೈಲ್ ಫೋನ್ ಮತ್ತು ವಾಹನದ ಕೀ ಹೊರತುಪಡಿಸಿ ಉಳಿದ ವಸ್ತುಗಳನ್ನು ಆಟದ ಮೈದಾನದೊಳಗೆ ತೆಗೆದುಕೊಂಡು ಹೋಗುದತೆ ನಿಷೇಧಿಸಲಾಗಿದೆ.

ಕ್ರಿಕೆಟ್ ಪ್ರೇಮಿಗಳು ಮೈದಾನದಲ್ಲಿ ಯಾವುದೇ ಪೋಸ್ಟರ್, ಬ್ಯಾನರ್ ಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುವಂತಿಲ್ಲ. ‘4’, ‘6’ ಬರೆದಿರುವ ಪ್ಲೆಕಾರ್ಡ್ ಗಳು, ಮಾರ್ಕರ್ ಗಳನ್ನು ಕೂಡಾ ಕೊಂಡೊಯ್ಯುವಂತಿಲ್ಲ ಎಂದು ಅಸ್ಸಾಂ ಕ್ರಿಕೆಟ್ ಅಸೋಸಿಯೇಶನ್ ತಿಳಿಸಿದೆ.

ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಹಿನ್ನಲೆಯಲ್ಲಿ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶ್ರೀಲಂಕಾ- ಭಾರತ ನಡುವಿನ ಮೊದಲ ಟಿ ಟ್ವೆಂಟಿ ಪಂದ್ಯ ರವಿವಾರ ಸಂಜೆ ಏಳು ಗಂಟೆಗೆ ಆರಂಭವಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss