ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ನ 2020 ಆವೃತ್ತಿಯು ಸೆಪ್ಟೆಂಬರ್ 19 ರಂದು ಪ್ರಾರಂಭವಾಗಲಿದೆ ಮತ್ತು ಫೈನಲ್ ನವೆಂಬರ್ 8 ರಂದು ನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಬ್ರಿಜೇಶ್ ಪಟೇಲ್ ಶುಕ್ರವಾರ ತಿಳಿಸಿದರು.
ಈ ಪಂದ್ಯಾವಳಿ ಯುಎಇಯಲ್ಲಿ ನಡೆಯಲಿದ್ದು, ಭಾರತ ಸರ್ಕಾರದಿಂದ ಅನುಮತಿ ಬಾಕಿ ಉಳಿದಿದೆ. ಎಮಿರೇಟ್ಸ್ ಕ್ರಿಕೆಟ್ ಮಂಡಳಿ, ಮತ್ತು ಎಸ್ಎಲ್ಸಿ, ಐಪಿಎಲ್ಗೆ ಆತಿಥ್ಯ ವಹಿಸುವ ಪ್ರಸ್ತಾಪದೊಂದಿಗೆ ಬಿಸಿಸಿಐ ಅನ್ನು ಸಂಪರ್ಕಿಸಿತ್ತು, ಅದಕ್ಕೆ ಅಗತ್ಯವಾದ ಮೂಲಸೌಕರ್ಯಗಳಿವೆ ಎಂದು ತಿಳಿಸಿತ್ತು.
ಐಸಿಸಿ ಪುರುಷರ ಟಿ 20 ವಿಶ್ವಕಪ್ ಅನ್ನು ಮುಂದೂಡುವುದರೊಂದಿಗೆ ಮೂಲತಃ ಅಕ್ಟೋಬರ್ 18 ರಿಂದ ನವೆಂಬರ್ 15 ರವರೆಗೆ ನಡೆಯಬೇಕಿತ್ತು. ಐಪಿಎಲ್ ನಡೆಯಲು ಒಂದು ಅವಕಾಶ ದೊರಕಿತು. ಮುಂದಿನ ವಾರ ನಡೆಯಲಿರುವ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ತಂಡಗಳಿಗೆ ನಿರ್ಗಮನದ ಯೋಜನೆ ಮತ್ತು ಪಂದ್ಯಾವಳಿಯ ಪೂರ್ಣ ವೇಳಾಪಟ್ಟಿಯನ್ನು ಕುರಿತು ಹೆಚ್ಚಿನ ವಿವರಗಳನ್ನು ತಿಳಿಸಲಾಗುವುದು.