Wednesday, July 6, 2022

Latest Posts

ಕ್ರಿಕೆಟ್ ಬೆಟ್ಟಿಂಗ್ ದಂಧೆ: ಇಬ್ಬರ ಬಂಧನ

ಧಾರವಾಡ: ಬೆಟ್ಟಿಂಗ್ ಅಡ್ಡೆಯ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಕ್ರಿಕಿಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿದ ಘಟನೆ ಬುಧವಾರ ಸತ್ತೂರಿನಲ್ಲಿ ನಡೆದಿದೆ.

ನವಲೂರಿನ ಅರ್ಜುನ ಮೋಹನ ನಲವಡಿ(28) ಹಾಗೂ ಎಂ.ಆರ್.ನಗರದ ಈರೇಶ ಚನ್ನಬಸಪ್ಪ ಎಣಿಗಾರ(28) ಬಂಧಿತರೆoದು ತಿಳಿದು ಬಂದಿದೆ.

ಚುಟುಕು(ಐಪಿಎಲ್) ಕ್ರಿಕೆಟ್ ಪಂದ್ಯಾವಳಿ ಆರಂಭದಿoದಲೂ ಹು-ಧಾ ಅವಳಿನಗರದಲ್ಲಿ ಬೆಟ್ಟಿಂಗ್ ದಂಧೆ ಬಹಳ ಜೋರಾಗಿದೆ. ಅಡ್ಡೆಗಳ ಮೇಲೆ ಆಗಾಗ್ಗೆ ದಾಳಿಯೂ ನಡೆದಿದೆ.

ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳ ಮೇಲೆ ಬೆಟ್ಟಿಂಗ್ ಆಡುಸುತ್ತಿದ್ದ ವೇಳೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರತಿ ತಂಡಗಳ ಆಟಗಾರರ ಮೇಲೆ, ಅವರ ವಿಕೆಟ್ ಹಾಗೂ ರನ್‌ಗಳ ಆಧಾರದ ಮೇಲೆ ಹಣ ಕಟ್ಟಿಸಿಕೊಳ್ಳುವ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸ್ ಇನ್ಸಪೆಕ್ಟರ್ ಅಲ್ತಾಫ್ ಮುಲ್ಲಾ ಹಾಗೂ ಅವರ ತಂಡ ಈ ದಾಳಿ ನಡೆಸಿ ಅವರ ಹೆಡೆಮುರಿ ಕಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss