Sunday, June 26, 2022

Latest Posts

ಕ್ರಿಸ್​ಗೇಲ್​ ಬೊಂಬಾಟ್ ಬ್ಯಾಟಿಂಗ್: ರಾಜಸ್ಥಾನ್​ ರಾಯಲ್ಸ್​ಗೆ 186 ರನ್​ಗಳ ಗುರಿ

ಅಬುಧಾಬಿ: ಯೂನಿವರ್ಸಲ್​ ಬಾಸ್​ ಕ್ರಿಸ್​ಗೇಲ್​ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು 185 ರನ್​ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡ ಮೊದಲನೇ ಓವರ್​ನಲ್ಲಿ ಮಂದೀಪ್​ ಸಿಂಗ್​ ವಿಕೆಟ್​ ಕಳೆದುಕೊಂದಿತ್ತು. ಬಳಿಕ ಆದರೆ ನಾಯಕ ಕೆ.ಎಲ್​ ರಾಹುಲ್​ ಜೊತೆಗೂಡಿದ ಕ್ರಿಸ್​ ಗೇಲ್​ 121 ರನ್​ ಸೇರಿಸಿ ಚೇತರಿಕೆ ನೀಡಿದರು. ರಾಹುಲ್​ ಸ್ಟೋಕ್ಸ್​ ಬಾಲ್​ಗೆ ತೆವಾಟಿಕೆ ಕ್ಯಾಚ್​ ನೀಡಿ ಔಟಾಗುತ್ತಿದ್ದಂತೆ ಬಂದ ನಿಕೋಲಾಸ್​ ಪೂರನ್​ 22 ರನ್​ಗಳಿಸಿ ಔಟಾದರು. ಕ್ರಿಸ್​ ಗೇಲ್​ 63 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 6 ಬೌಂಡರಿಗಳ ನೆರವಿನಿಂದ 99 ರನ್​ಗಳಿಸಿ ಶತಕ ವಂಚಿತರಾದರು.
ಇನ್ನು ಮ್ಯಾಕ್ಸ್​ವೆಲ್​ 6 ಮತ್ತು ದೀಪಕ್​ ಹೂಡಾ 1 ರನ್​ಗಳಿಸಿ ಅಜೇಯರಾಗಿ ಉಳಿದರು.
ಒಟ್ಟಾರೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 20 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 185 ರನ್​ಗಳಿಸಿ ರಾಜಸ್ಥಾನ್​ ರಾಯಲ್ಸ್​ಗೆ 186 ರನ್​ಗಳ ಗುರಿ ನೀಡಿದೆ.
ರಾಜಸ್ಥಾನ್​ ರಾಯಲ್ಸ್​ ಪರ ಜೋಪ್ರಾ ಅರ್ಚರ್​ ಮತ್ತು ಬೆನ್​ ಸ್ಟೋಕ್​ ತಲಾ 2 ವಿಕೆಟ್ ಪಡೆದು ಮಿಂಚಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss