spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, December 8, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕ್ರೀಡಾಭಾರತಿಯಿಂದ ಮಂಗಳೂರು ಮಹಾನಗರ ಮಟ್ಟದ ಲಗೋರಿ ಸ್ಪರ್ಧೆ

- Advertisement -Nitte

 ಹೊಸ ದಿಗಂತ ವರದಿ, ಮಂಗಳೂರು:

ಪ್ರಾಚೀನ ಕಾಲದಿಂದಲೂ ಅನುಸರಿಸಿಕೊಂಡು ಬಂದಿರುವ ಗ್ರಾಮೀಣ ಕ್ರೀಡೆಗಳನ್ನು ಯುವಜನಾಂಗ ಮುಂದುವರಿಸಿಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ ಕ್ರೀಡಾಭಾರತಿ ಆಯೋಜಿಸುತ್ತಿರುವ ಕಾರ್ಯಕ್ರಮಗಳು ಮಾದರಿಯಾದುದು ಎಂದು ಬರ್ಕೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಜ್ಯೋತಿರ್ಲಿಂಗ ಹೊನ್ನಕಟ್ಟೆ ಹೇಳಿದರು.
ಕ್ರೀಡಾಭಾರತಿ ವತಿಯಿಂದ ನಗರದ ಮಣ್ಣಗುಡ್ಡೆ ಪ್ರತಾಪನಗರದಲ್ಲಿರುವ ಸಂಘನಿಕೇತನದಲ್ಲಿ ಹನುಮಾನ್ ಜಯಂತಿಯ ಪ್ರಯುಕ್ತ ಆಯೋಜಸಿದ್ದ ಮಂಗಳೂರು ಮಹಾನಗರ ಮಟ್ಟದ ಲಗೋರಿ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಜಾನಪದ ಕ್ರೀಡೆಗಳ ಆರಂಭವಾದುದು ಸಾಹಿತ್ಯದಿಂದ. ನಮ್ಮ ಸಂಸ್ಕೃತಿಯ ಸೊಗಡು ಗ್ರಾಮೀಣ ಕ್ರೀಡೆಗಳಲ್ಲಿ ಅಡಕವಾಗಿದೆ. ಬದುಕನ್ನು ಕಲಿಸುವ ಪಾಠ ಲಗೋರಿಯಂತಹ ಕ್ರೀಡೆಗಳಲ್ಲಿ ಅಡಗಿದೆ. ಋಷಿ ಸಂಸ್ಕೃತಿಯ ಮೂಲಕ ಬೆಳೆದು ಬಂದ ಜಾನಪದ ಕ್ರೀಡೆಗಳನ್ನು ಯುವ ಸಮುದಾಯ ಮುಂದುವರಿಸಿಕೊಂಡು ಹೋಗಬೇಕು ಎಂದರು.
ಕ್ರೀಡಾಭಾರತಿಯ ಗೌರವಾಧ್ಯಕ್ಷ ಬಿ.ನಾಗರಾಜ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ದೇಶೀಯ ಕ್ರೀಡೆಗೆ ಹೆಚ್ಚು ಮಹತ್ವವನ್ನು ನೀಡಲಾಗುತ್ತಿದೆ.
ಗ್ರಾಮೀಣ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಳ್ಳಿ ಹಳ್ಳಿಗಳ ಮೂಲೆಗಳಿಂದಲೂ ಗ್ರಾಮೀಣ ಕ್ರೀಡಾಪಟುಗಳುನ್ನು ಹುಡುಕಿತರುವ ಮತ್ತು ಅವರನ್ನು ತರಬೇತಿ ನೀಡುವ ಕೆಲಸವನ್ನು ಕ್ರೀಡಾ ಭಾರತಿಯು ಹಲವು ವರ್ಷಗಳಿಂದಲೂ ಮಾಡುತ್ತಾ ಬಂದಿದೆ ಎಂದರು.
ಹೊಸ ದಿಗಂತ ಪತ್ರಿಕೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಎಸ್.ಪ್ರಕಾಶ್ ಕ್ರೀಡಾಪಟುಗಳನ್ನು ಗೌರವಿಸಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss