Wednesday, July 6, 2022

Latest Posts

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಅಥ್ಲೇಟ್ಸ್ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್: ಕೊರೋನಾ ಲಾಕ್ ಡೌನ್

ಹೊಸದಿಲ್ಲಿ: ದೇಶದಲ್ಲಿ ಕೊರೋನಾ ಸೋಂಕಿನಿಂದ ಜನತೆ ತೊಂದರೆ ಅನುಭವಿಸುತ್ತಿದ್ದಾರೆ, ಕೊರೋನಾ ಲಾಕ್ ಡೌನ್ ಮಾಡಲಾಗಿದೆ. ದೇಶದಲ್ಲಿ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿರುವ ಕಾರಣ ಇಂದು ಪ್ರಧಾನಿ ಮೋದಿ ದೇಶದ ಕ್ರಿಕೆಟ್ ಆಟಗಾರರು ಹಾಗೂ ಅಥ್ಲೇಟ್ಸ್ ಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.

ಪ್ರಧಾನಿ ಜೊತೆಗಿನ ಚರ್ಚೆಯಲ್ಲಿ 40 ಕ್ರೀಡಾ ಪಟುಗಳು ಸೇರಿದಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಭಾಗಿಯಾಗಿದ್ದರು. ಇವರಲ್ಲಿ 12 ಜನರಿಗೆ ಮೋದಿಯವರ ಜೊತೆ ಮಾತನಾಡಲು ಮೂರು ನಿಮಿಷಗಳ ಅವಕಾಶ ನೀಡಲಾಗಿತ್ತು.

ದೇಶದಲ್ಲಿ ಲಾಕ್ ಡೌನ್ ಇರುವ ಕಾರಣ ಯಾವುದೇ ಕ್ರೀಡಾ ಚಟುವಟಿಕೆಗಳಿಗೂ ಅವಕಾಶ ನೀಡಿಲ್ಲ, ದೇಶದ ಪರಿಸ್ಥಿತಿ ಸುಧಾರಿಸಿಕೊಳ್ಳುವ ಕುರಿತು ಯಾವುದೇ ಖಚಿತ ಮಾಹಿತಿ ಇಲ್ಲದಿರುವುದರಿಂದ ಏ.15ರವರೆಗೂ ಐಪಿಎಲ್ ಮುಂದೂಡಲಾಗಿದೆ.

ಲಾಕ್ ಡೌನ್ ಪಾಲಿಸುವಂತೆ ಮತ್ತು ಕೊರೋನಾ ಕುರಿತಾಗಿ ಜಾಗೃತಿ ಮೂಡಿಸುವ ಕಾರ್ಯವನ್ನು ಕ್ರೀಡಾ ಪಟುಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಈ ಚರ್ಚೆಯಲ್ಲಿ ಕ್ರಿಕೆಟ್ ತಂಡದಿಂದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ನಿ, ಮಹೇಂದ್ರ ಸಿಂಗ್ ಧೋನಿ,ಯುವರಾಜ್ ಸಿಂಗ್, ರೋಹಿತ್ ಶರ್ಮಾ, ಜಹೀರ್ ಖಾನ್, ಕೆ.ಎಲ್. ರಾಹುಲ್ ಇದ್ದರು. ಉಳಿದಂತೆ ಪಿ.ವಿ ಸಿಂಧು, ನೀರಜ್ ಚೋಪ್ರಾ, ಹಿಮಾ ದಾಸ್, ಮೇರಿ ಕೋಮ್, ಅಮಿತ್ ಪಂಘಾಲ್, ವಿನೇಶ್ ಪೊಗಟ್, ವಿಶ್ವನಾತ್ ಆನಂತ್, ಮನಿ ಭಕೇರ್ ಮತ್ತು ಇನ್ನಿತರೆ ಕ್ರೀಡಾಪಟುಗಳು ಭಾಗಿಯಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss