ಕ್ವಾರಂಟೈನ್ ಉಲ್ಲಂಘಿಸಿದ ಕೊರೋನಾ ಸೋಂಕಿತನ ವಿರುದ್ಧ ಕೇಸು ದಾಖಲು

0
73

ಮಂಗಳೂರು: ಕ್ವಾರಂಟೈನ್ ಉಲ್ಲಂಘಿಸಿದ ಬೆಳ್ತಂಗಡಿ ತಾಲೂಕು ಕರಾಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೇರಿ ನಿವಾಸಿ ಕೊರೋನಾ ಸೋಂಕಿತ ವ್ಯಕ್ತಿಯ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು ಸಹಾಯಕ ಆಯುಕ್ತರಾದ ಡಾ.ಯತೀಶ್ ಉಳ್ಳಾಲ್ ರವರು ಈತನ ವಿರುದ್ಧ ದೂರು ದಾಖಲಿಸಿದ್ದಾರೆ.

ಈತ ಮಾ.21 ರಂದು ದುಬೈನಿಂದ ಬೆಂಗಳೂರು ಮೂಲಕ ಊರಿಗೆ ಬಂದು ನಂತರದಲ್ಲಿ 14 ದಿನಗಳು ಮನೆಯಲ್ಲೇ ಇರುವಂತೆ ಈತನಿಗೆ ಆದೇಶ ನೀಡಲಾಗಿದ್ದರೂ ಅದನ್ನು ಉಲ್ಲಂಘಿಸಿದ್ದ. ಈ ಕಾರಣದಿಂದ ಈತನ ಮತ್ತು ಈತನ ಮನೆಯವರ ವಿರುದ್ದ ಪುತ್ತೂರು ಸಹಾಯಕ ಆಯುಕ್ತರು ಉಪ್ಪಿನಂಗಡಿ ಪೋಲಿಸರಿಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here