ಮಂಗಳೂರು: ತಾನು ಸಂದರ್ಶನ ನೀಡಿದ್ದ ಪತ್ರಕರ್ತನೋರ್ವನಲ್ಲಿ ಕೊರೋನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಕ್ವಾರಂಟೈನ್ ಗೆ ಒಳಗಾಗಿದ್ದ ಕಾಸರಗೋಡು ಜಿಲ್ಲೆಯ ಜಿಲ್ಲಾಧಿಕಾರಿ ಡಿ. ಸಜಿತ್ ಬಾಬು ಅವರ ಕೊರೊನಾ ಪರೀಕ್ಷಾ ವರದಿ ಗುರುವಾರ ಸಂಜೆ ಕೈಸೇರಿದ್ದು, ವರದಿ ನೆಗೆಟಿವ್ ಆಗಿದೆ.
ಸ್ವ ಕ್ವಾರಂಟೈನ್ ಗೆ ಒಳಗಾಗಿದ್ದರು
ಕಾಸರಗೋಡಿನ ದೃಶ್ಯ ಮಾಧ್ಯಮದ ಪತ್ರಕರ್ತನಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತಮ್ಮ ಕಾರು ಚಾಲಕ ಹಾಗೂ ಗನ್ ಮ್ಯಾನ್ ಸಹಿತ ಸ್ವ ಕ್ವಾರಂಟೈನ್ ಗೆ ಒಳಗಾಗಿದ್ದರಲ್ಲದೆ, ತಮ್ಮ ಗಂಟಲ ದ್ರವ ಪರೀಕ್ಷೆಗೆ ರವಾನಿಸಿದ್ದರು. ಇದೀಗ ವರದಿ ನೆಗಟಿವ್ ಬಂದಿದೆ ಎಂದು ಮೂಲಗಳು ತಿಳಿಸಿವೆ.