ಕ್ವಾರೆಂಟೀನ್ ಕಲಿಸಿದ ಜೀವನ ಪಾಠಗಳು..ಈಗ ಹೇಳಿ ಕ್ವಾರೆಂಟೀನ್ ಅಷ್ಟೊಂದು ಕೆಟ್ಟದ್ದಾ?

0
27

ಕ್ವಾರೆಂಟೀನ್ ಕೆಟ್ಟದು. ನಮ್ಮನ್ನು ಮನೆಯಲ್ಲೇ ಕೂರುವಂತೆ ಮಾಡಿದೆ. ಈ ವರ್ಷದಲ್ಲಿ ಏನೆಲ್ಲಾ ಯೋಜನೆಗಳನ್ನು ಹಾಕಿದ್ದೆವು. ಆದರೆ ಕ್ವಾರೆಂಟೀನ್ ಎಲ್ಲವನ್ನು ಹಾಳು ಮಾಡಿತ್ತು. ಕ್ವಾರೆಂಟೀನ್ ಆದರೂ ಪರವಾಗಿಲ್ಲ, ಯಾರಾದರೂ ನೆಂಟರ ಮನೆ, ಅಜ್ಜ ಅಜ್ಜಿ ಮನೆಯಲ್ಲಿ ಹೋಗಿ ಸೇರಿದ್ದರೆ, ಅಲ್ಲಿ ಅವರ ಜೊತೆ ಮಜಾ ಮಾಡಬಹುದಿತ್ತು. ಆದರೆ ಈಗ ಮನೆಯಲ್ಲಿ ನಾವು ನಾಲ್ಕು ಮಂದಿ ಮಾತ್ರ.
ಈ ರೀತಿ ಪರಿಸ್ಥಿತಿ ನನ್ನದಷ್ಟೇ ಅಲ್ಲ, ತುಂಬಾ ಜನರು ಹೀಗೆ ಕ್ವಾರೆಂಟೀನ್‌ನನ್ನು ಶಪಿಸುತ್ತಾರೆ. ಆದರೆ ಕ್ವಾರೆಂಟೀನ್‌ನಲ್ಲಿ ನಿಮ್ಮ ಜೀವನದಲ್ಲಿ ಆದ ಬದಲಾವಣೆಗಳನ್ನು ಗಮನಿಸಿದ್ದೀರಾ? ಎಂದಾರೂ ತಿಂಗಳಗಟ್ಟಲೆ ನಿಮ್ಮವರೊಂದಿಗೆ ಕಾಲ ಕಳೆಯುವ ಅವಕಾಶ ನಿಮಗೆ ದೊರೆತಿತ್ತಾ? ಜೀವನದಲ್ಲಿ ಏನೇ ಕೆಟ್ಟದಾದರೂ ಅದರಲ್ಲಿ ಒಳ್ಳೆಯದನ್ನು ಹುಡುಕಿ ಬದುಕಿದರೆ, ಬದುಕು ಸುಲಭವಾಗುತ್ತದೆ.. ಹೇಗೆ ಅಂತೀರಾ ಓದಿ..
ಎಲ್ಲಾ ಕುಳಿತು ಊಟ ಮಾಡಿದ್ದು: ಎಷ್ಟು ದಿನ ಆಗಿತ್ತು ಎಲ್ಲರೂ ಒಂದೇ ಸಮಯಕ್ಕೆ, ಒಂದೇ ಕಡೆ ಕುಳಿತು ಊಟ ಮಾಡಿ? ಮಕ್ಕಳು ಬೆಂಗಳೂರು ಅಥವಾ ವಿದೇಶ, ತಂದೆಗೆ ಕೆಲಸ, ತಾಯಿ ಎಲ್ಲರೂ ಹೋದಮೇಲೆ ನಿಧಾವವಾಗಿ ತಿನ್ನುತ್ತಿದ್ದರು. ಆದರೆ ಕ್ವಾರೆಂಟೀನ್‌ನಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟ, ತಿಂಡಿ ಟೀ ಕುಡಿದದ್ದು. ಒಟ್ಟಿಗೆ ಕುಳಿತು ಊಟ ಮಾಡುವ ಸುಖ ಅನುಭವಿಸಿದ್ದು.
ಹೆಚ್ಚಿನ ವ್ಯಾಯಾಮ ಮಾಡಿದ್ದು: ಹೌದು ಜಿಮ್ ಒಂದಿಲ್ಲ, ಜಿಮ್ ಬೇಕು ಎನ್ನುವವರಿಗೆ ಬೇಸರವಾಗಿದ್ದು ನಿಜ. ಆದರೆ ಮಾರ್ನಿಂಗ್ ವಾಕ್ ಅಥವಾ ರನ್ ಮಾಡಬಹುದು, ಅಲ್ಲದೇ ನಮಗೆ ಬೇಕಾದಷ್ಟು ಸಮಯ ವ್ಯಾಯಾಮ, ಯೋಗ ಎಲ್ಲವನ್ನೂ ಮಾಡಬಹುದಾಗಿತ್ತು. ರನ್ ಮಾಡಲು ಹೋದರೆ ಇಷ್ಟು ಸಮಯದೊಳಗೆ ವಾಪಸ್ ಬರಬೇಕಿತ್ತು. ಏಕೆಂದರೆ ದಿನಚರಿ ಹಾಗಿರುತ್ತಿತ್ತು. ಆದರೆ ಕ್ವಾರೆಂಟೀನ್ ಸಮಯದಲ್ಲಿ ಹಾಗಲ್ಲ. ಮನಸ್ಸಿಗೆ ಬಂದಷ್ಟು ಹೊತ್ತು ನಮಗನಿಸಿದ್ದು ಮಾಡಬಹುದಿತ್ತು.
ಗಿಡ ಬೆಳೆಸಿದ್ದು: ಗಾರ್ಡ್‌ನ್ ಮಾಡುವ ಆಸೆ ಎಷ್ಟು ಸಮಯದಿಂದ ಇದ್ದರೂ, ಸಮಯ ಸಾಕಾಗದೇ ಸುಮ್ಮನಿದ್ದೆವು. ಆದರೆ ಹೆಚ್ಚು ಸಮಯ ಇದ್ದಿದ್ದರಿಂದ ನಮ್ಮ ಗಾರ್ಡನ್ ಸ್ಥಿತಿ ಏನಾಗಿದೆ, ಮತ್ತೆ ಹೊಸ ಗಿಡಗಳನ್ನು ಬೆಳೆಸಬೇಕು. ಅಥವಾ ಇರುವುದನ್ನು ಉಳಿಸಬೇಕು ಹೀಗೆ ಬದಲಾವಣೆ ಆಗಿದ್ದಂತೂ ಸತ್ಯ.
ನಮ್ಮ ಬಗ್ಗೆ ಯೋಚನೆ ಮಾಡಿದ್ದು: ಮುಂದೇನಾಗುತ್ತದೆ, ಕೊರೋನಾ ಎಂದು ಹೋಗುತ್ತದೆ, ಇಂಥದ್ದನ್ನು ಬಿಟ್ಟು ನಾವೇನು, ನಮಗೇನು ಬೇಕು, ಮುಂದಿನ ನಮ್ಮ ಜೀವನ ಹೇಗೆ ಎಂಬುದರ ಬಗ್ಗೆ ಪ್ರತಿಯೊಬ್ಬರೂ ಯೋಚಿಸಿದ್ದಾರೆ. ತುಂಬ ಸಮಯ ಇರುತ್ತಿದ್ದರಿಂದ ಆಲೋಚನೆಗಳೇ ಹೆಚ್ಚು. ಡೈರಿ ಬರೆಯುವುದನ್ನು ಎಷ್ಟೊಂದು ಜನ ಆರಂಭಿಸಿದ್ದಾರೆ. ಸೆಲ್ಫ್ ಲವ್ ಹೆಚ್ಚಿದೆ.
ಕಳೆದು ಹೋದ ಸ್ನೇಹಿತರು ಮತ್ತೆ ಸಿಕ್ಕಾಗ: ಹೌದು ಸ್ನೇಹಿತರೊಂದಿಗೆ ಮಾತನಾಡುವ ಆಸೆ ಇದ್ದರೂ ಸಮಯ ಇರುತ್ತಿರಲಿಲ್ಲ. ಆದರೆ ಈಗ ಎಲ್ಲ ಸ್ನೇಹಿತರನ್ನು ಭೇಟಿ ಮಾಡಲಾಗದಿದ್ದರೂ ಮೆಸೇಜ್, ಕಾಲ್ ವಿಡೀಯೋ ಕಾಲ್ ಮಾಮೂಲಾಯ್ತು. ಶಾಲೆಯಲ್ಲಿ ಓದುತ್ತಿದ್ದ ಸ್ನೇಹಿತರ ಜೊತೆ ಸೇರಿ ಎಲ್ಲ ನೆನಪುಗಳನ್ನು ಮೆಲುಕು ಹಾಕಿ ಜೀವನದ ಸ್ವಾದ ಅನುಭವಿಸಿದ್ದೀವಿ.
ಆರೋಗ್ಯವೇ ಭಾಗ್ಯ: ನಮ್ಮ ಆರೋಗ್ಯ ಅಷ್ಟೇ ಅಲ್ಲ, ಎಲ್ಲರ ಆರೋಗ್ಯದ ಮೇಲೂ ಗಮನ ಹೆಚ್ಚಾಗಿದೆ. ಸಣ್ಣ ಶೀತವೂ ಬಾರದಂತೆ ತಮ್ಮ ಆರೋಗ್ಯ ನೋಡಿಕೊಂಡಿದ್ದೇವೆ. ಆರೋಗ್ಯಕರ ಆಹಾರಕ್ಕೆ ಒತ್ತು ನೀಡಿದ್ದೇವೆ. ಹೊಸ ಹೊಸ ಅಡುಗೆ ಕಲಿತು,ಮಾಡಿ ಬಡಿಸಿದ್ದೇವೆ.
ಧನ್ಯವಾದ ಹೇಳುವ ಅಭ್ಯಾಸ: ಈ ಹಿಂದೆಲ್ಲ, ಮನೆಯವರು ಅಥವಾ ಸ್ನೇಹಿತರು ಮಾಡುವ ಎಷ್ಟೋ ಕೆಲಸಗಳಿಗೆ ಅವರಿಗೆ ಧನ್ಯವಾದ ಹೇಳಿರುವುದಿಲ್ಲ. ಈಗ ತಾಯಿ ಎಷ್ಟೆಲ್ಲ ಕಷ್ಟಪಡುತ್ತಾಳೆ, ಅವರ ಮನಸ್ಥಿತಿ ಹೇಗಿರುತ್ತದೆ ಎಂದು ತಿಳಿದಿದೆ. ಸಣ್ಣ ಪುಟ್ಟದ್ದಕ್ಕೂ ಧನ್ಯವಾದ ಹೇಳಿ ಅವರು ಮಾಡುತ್ತಿರುವ ಕೆಲಸ ಎಷ್ಟು ಮುಖ್ಯ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ.

ಈಗ ಕೇಳಿ ಕ್ವಾರೆಂಟೀನ್ ನಿಜವಾಗಿಯೂ ಅಷ್ಟೊಂದು ಕೆಟ್ಟದ್ದಾ?

LEAVE A REPLY

Please enter your comment!
Please enter your name here