Wednesday, August 10, 2022

Latest Posts

ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ಪ್ರಾರಂಭವಾದ ಜಗಳ: ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಬೆಂಗಳೂರಿನಲ್ಲೊಂದು ಕ್ರೂರನ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಯುವಕನ್ನು ಚಾಕುವಿನಿಂದ ಇರಿದು ಕೊಲೆ ಗೈದಿದ್ದಾರೆ. ರಸ್ತೆ ಪಕ್ಕದಲ್ಲಿ ಸಿಗರೇಟ್ ಸೇದುತ್ತಿರುವ ಮೂವರಿಗೆ ಬುದ್ಧಿ ಹೇಳಿದ್ದಕ್ಕಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಕೊಲೆಯಾದ ಯುವಕ ಜಯನಗರ ನಿವಾಸಿ ಅರುಣ್(೨೫) ಆರೋಪಿಗಳನ್ನು ಬನಶಂಕರಿ ನಿವಾಸಿ ಸಲ್ಮಾನ್, ಇಮ್ರಾನ್, ಸುಝೈನ್ ಎಂದು ಗುರುತಿಸಲಾಗಿದೆ. ಈ ಮೂವರು ಆರೋಪಿಗಳು ನಿನ್ನೆ ತಡ ರಾತ್ರಿ ಜಯನಗರದ ಬೇಕರಿಯೊಂದರ ಪಕ್ಕ ಸಿಗರೇಟ್ ಸೇದಿಕೊಂಡು ಕೂಗಾಟ ನಡೆಸುತ್ತಿದ್ದರು. ನಂತರ ಇದನ್ನು ಅರುಣ್ ಮತ್ತು ಅವನಿಬ್ಬರು ಸ್ನೇಹಿತರು ಪ್ರಶ್ನಿಸಿದ್ದಾರೆ. ಎರಡು ಗುಂಪುಗಳ ನಡುವೆ ಗಲಾಟೆ ಪ್ರಾರಂಭವಾಗಿದೆ. ಗಲಾಟೆಯ ನಡುವೆ ಅರುಣ್ ಎದೆಗೆ ಚಾಕುವಿನಿಂದ ಬಲವಾಗಿ ಇರಿದಿದ್ದಾರೆ.

ತಕ್ಷಣ ಅರುಣ್ ಸ್ನೇಹಿತರು ಮತ್ತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಚಿಕಿತ್ಸೆಗಾಗಿ ಅರುಣ್‌ನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss