Monday, July 4, 2022

Latest Posts

ಕ್ಷುಲ್ಲಕ ಕಾರಣಕ್ಕೆ ಜಗಳ: ವ್ಯಕ್ತಿ ಓವ೯ನಿಗೆ ಚಾಕು ಇರಿತ

ಹೊಸ ದಿಗಂತ ವರದಿ ಕಲಬುರಗಿ:

ರಾಜಕೀಯ ವಿಷಯದಲ್ಲಿ ನಡೆದ ಜಗಳದಲ್ಲಿ ವ್ಯಕ್ತಿಯೋರ್ವನಿಗೆ ಚಾಕು ಇರಿದ ಘಟನೆ ಸೇಡಂ ತಾಲೂಕಿನ ಕೋಡ್ಲಾ‌ ಗ್ರಾಮದಲ್ಲಿ ನಡೆದಿದೆ.

ಕೋಡ್ಲಾ‌ ಗ್ರಾಮದ ಚಹಾ ಅಂಗಡಿ ಬಳಿ ರಾಜಕೀಯ ಚರ್ಚೆಯ ವೇಳೆಯಲ್ಲಿ ಗ್ರಾಮದ ಶೇಖರ ಗುರುಲಿಂಗಪ್ಪ ಕೋಡ್ಲಾ ಅವರ ಕುತ್ತಿಗೆಗೆ ವೆಂಕಟರೆಡ್ಡಿ ಎಂಬಾತ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ.

ಕೂಡಲೇ ದಾಳಿಗೋಳಗಾದ ಶೇಖರ ಎಂಬಾತನನ್ನು ಸೇಡಂನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ಸಿಪಿಐ ರಾಜಶೇಖರ ಹಳಗೋದಿ, ಪಿಎಸ್ಐ ನಾನಾಗೌಡ ತಿಳಿಸಿದ್ದಾರೆ. ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss