Wednesday, July 6, 2022

Latest Posts

ಕ್ಷುಲ್ಲಕ ಕಾರಣಕ್ಕೆ ನಾಲ್ವರಿಂದ ಟೋಲ್ ಸಂಗ್ರಹ ನೌಕರನ ಹತ್ಯೆ

ಮೈಸೂರು: ಟೋಲ್ ಸಂಗ್ರಹ ನೌಕರರನ್ನು ನಾಲ್ವರು ಯುವಕ ಗುಂಪು ಕ್ಷುಲ್ಲಕ ಕಾರಣಕ್ಕೆ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಡಕೊಳ ಟೋಲ್‌ಗೇಟ್‌ನಲ್ಲಿ ನಡೆದಿದೆ.
ಟೋಲ್‌ಗೇಟ್‌ನಲ್ಲಿ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದ ಗಣೇಶ್(೨೩) ಎಂಬಾತನೇ ಕೊಲೆಗೀಡಾದವ. ಮೈಸೂರಿನಿಂದ ನಂಜನಗೂಡಿಗೆ ಹೋಗುತ್ತಿದ್ದ ನಾಲ್ವರು ಯುವಕರ ಗುಂಪು ಟೋಲ್ ಸಂಗ್ರಹ ಮಾಡುವ ವಿಚಾರವಾಗಿ ಅಲ್ಲಿನ ನೌಕರ ಗಣೇಶ್ ಗಲಾಟೆ ನಡೆಸಿದ್ದಾರೆ. ಮಾತಿಗೆ ಮಾತು ಬೆಳೆದು, ಪರಿಸ್ಥಿತಿ ವಿಕೋಪಕ್ಕೆ ಹೋದ ಪರಿಣಾಮ ಆ ನಾಲ್ವರ ಗುಂಪು ಗಣೇಶನನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ಇದರಿಂದಾಗಿ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಿರುವ ಸಿಬ್ಬಂದಿ ತಮಗೆ ಸೂಕ್ತ ರಕ್ಷಣೆ ಬೇಕೆಂದು ಪಟ್ಟು ಹಿಡಿದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಮೈಸೂರಿನ ಗ್ರಾಮಾಂತರ ಠಾಣೆಯ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆಗೆ ಸಂಬoಧಿಸಿದoತೆ ಮೂವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss