ಹೊಸದಿಗಂತ ವರದಿ,ಮೈಸೂರು:
ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರನ್ನು ಕೊಲೆ ಮಾಡಿದ್ದ ಆರೋಪಿಯೊಬ್ಬನನ್ನು ಮೈಸೂರಿನ ಲಷ್ಕರ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ
ಮoಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಹನುಮಂತನಗರದ ನಿವಾಸಿ ಆಲ್ವೀನ್ (೩೬) ಬಂಧಿತ ಆರೋಪಿ.
ಈತ ಅ.೧೭ರಂದು ಮೈಸೂರಿನ ವೀರನಗೆರೆಯಲ್ಲಿ ತಾನು ವಾಸವಿದ್ದ ಮನೆಯಲ್ಲಿ ತನ್ನ ಹೆಂಡತಿಯೊAದಿಗೆ ಜಗಳವಾಡುತ್ತಿದ್ದಾಗ, ಬಿಡಿಸಲು ಬಂದ ಎದುರು ಮನೆಯ ಮಹದೇವಮ್ಮ ಎಂಬವರಿಗೆ ಕಾಲಿನಿಂದ ಒದ್ದು, ತಲೆಯನ್ನು ಗೋಡೆಗೆ ಗುದ್ದಿಸಿ, ಚಾಕುವಿನಿಂದ ಹೊಟ್ಟೆಗೆ ಚುಚ್ಚಿ ಕೊಲೆ ಮಾಡಿದ್ದ, ಅಲ್ಲದೆ ತಲೆ ಮರೆಸಿಕೊಳ್ಳುವ ಉದ್ದೇಶದಿಂದ ವೀರನಗೆರೆಯ ಮನೆಯನ್ನು ಖಾಲಿ ಮಾಡಿ ಶ್ರೀರಂಗಪಟ್ಟಣದಲ್ಲಿ ಮನೆ ಮಾಡಿಕೊಂಡಿದ್ದ. ಈ ಸಂಬoಧ ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಯನ್ನು ಶ್ರೀರಂಗಪಟ್ಟಣದ ಬಸ್ ಸ್ಟಾ÷್ಯಂಡ್ ಬಳಿ ಬಂಧಿಸಿದ್ದಾರೆ.
ಆರೋಪಿ ಅಲ್ವಿನ್ ವಿನಾಕಾರಣ ಸಾರ್ವಜನಿಕರೊಂದಿಗೆ ಗಲಾಟೆ ಮಾಡಿ, ಕೊಲೆ ಮತ್ತು ಮಾರಣಾಂತಿಕ ಹಲ್ಲೆ ಮಾಡುವ ಪ್ರವೃತಿ ಉಳ್ಳವನಾಗಿದ್ದು, ಈ ಹಿಂದೆ ಮೈಸೂರು ನಗರದ ನರಸಿಂಹರಾಜ ಪೊಲೀಸ್ ಠಾಣೆ ಹಾಗೂ ಆಲನಹಳ್ಳಿ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಕೊಲೆ ಬೆದರಿಕೆ ಪ್ರಕರಣಗಳು ದಾಖಲಾಗಿ, ಜೀವಾವಧಿ ಶಿಕ್ಷೆ ಅನುಭವಿಸಿ ಸೆಪ್ಟೆಂಪರ್ ತಿಂಗಳಲ್ಲಿ ಕಾರಾಗೃಹದಿಂದ ಬಿಡುಗಡೆಯಾಗಿದ್ದನು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.