ಹೊಸ ದಿಗಂತ ಆನ್ ಲೈನ್:
ಕುಡಿದ ಮತ್ತಿನಲ್ಲಿ ಏನು ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ ಇಲ್ಲೊಂದು ಭಯಾನಕ ನೈಜ ಉದಾಹರಣೆ ಇದೆ.
ಹೌದು.. ಇಲ್ಲೊಬ್ಬ ವ್ಯಕ್ತಿ ಕುಡಿದ ಮತ್ತಿನಲ್ಲಿ ಇನ್ನೊಬ್ಬನ ಮರ್ಮಾಂಗವನ್ನೇ ಹಲ್ಲಿಂದ ಕಚ್ಚಿ ತುಂಡು ಮಾಡಿದ್ದಾನೆ. ಈ ವಿಚಿತ್ರ ಘಟನೆ ನಡೆದಿರುವುದು ಕೇರಳದ ಕುನ್ನಾಥುರನ ಬಾರ್ನಲ್ಲಿ.
ಈ ಕೃತ್ಯ ಎಸಗಿರುವಾತ ಷರೀಫ್(28). ಈತನ ಕೃತ್ಯಕ್ಕೆ ಬಲಿಯಾಗಿರುವಾತ ಸುಲೇಮಾನ್(55).
ಷರೀಫ್ ಮತ್ತು ಸುಲೇಮಾನ್ ಇಬ್ಬರೂ ಬೇರೆ-ಬೇರೆ ವಾಹನಗಳಲ್ಲಿ ಬಾರ್’ಗೆ ಹೋಗುತ್ತಿದ್ದರು. ಆ ವೇಳೆ ಷರೀಫ್ ಆಟೋ ಸುಲೇಮಾನ್ ಕಾರಿಗೆ ಡಿಕ್ಕಿ ಹೊಡೆದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳವಾಗಿದೆ. ನಂತರ ಇಬ್ಬರೂ ಬಾರ್’ಗೆ ಹೋಗಿ ಕಂಠಪೂರ್ತಿ ಕುಡಿದಿದ್ದಾರೆ. ಕುಡಿದ ಮತ್ತಿನಲ್ಲಿ ಸಿಟ್ಟು ನೆತ್ತಿಗೇರಿ ಷರೀಫ್ ಸುಲೇಮಾನ್ ಮರ್ಮಾಂಗವನ್ನೇ ಹಲ್ಲಿಂದ ಕಚ್ಚಿ ತುಂಡು ಮಾಡಿದ್ದಾನೆ.
ಇಬ್ಬರ ಜಗಳವನ್ನು ಬಿಡಿಸಲು ಹೋದ ಬಾರ್ ಸಿಬ್ಬಂದಿಯ ಮೇಲೆಯೂ ಷರೀಫ್ ಹಲ್ಲೆ ನಡೆಸಿದ್ದಾನೆ. ನಂತರ ಬಾರ್ ಸಿಬ್ಬಂದಿ ಅಲ್ಲಿರುವ ಗ್ರಾಹಕರ ಸಹಾಯದಿಂದ ಷರೀಫ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಸುಲೇಮಾನ್ ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ ತುಂಡಾದ ಮರ್ಮಾಂಗವನ್ನ ಮರು ಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸುಲೇಮಾನ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.