ಹೊಸದಿಗಂತ ವರದಿ,ರಾಮನಗರ:
ಸಮಸ್ತ ಕ್ಷೇತ್ರದ ಜನತೆಗೆ ಒಳ್ಳೆಯದಾಗಲಿ ಹಾಗೂ ಕ್ಷೇತ್ರ ಅಬಿವೃದ್ದಿಯ ಪಥದತ್ತ ಸಾಗಲಿ ಎಂದು ಜೆಡಿಎಸ್ ಭವನದಲ್ಲಿ ಹೋಮ- ಪೂಜೆ ಮಾಡಿಸಲಾಗಿದೆ ಎಂದು ಶಾಸಕ ಎ.ಮಂಜು ತಿಳಿಸಿದರು.
ಸುದ್ದಿಗಾರರೊಂದಿಗೆ ಶಾಸಕ ಎ.ಮಂಜುರವರು ಮಾತನಾಡಿ ಕ್ಷೇತ್ರದ ಮತದಾರರ ಆಶೀರ್ವಾದದ ಜೊತೆಯಲ್ಲಿ ದೇವರ ಅನುಗ್ರಹವಿರಬೇಕು ಎಂದು ಹೋಮ ಮಾಡಲಾಗಿದೆ, ಕ್ಷೇತ್ರದಲ್ಲಿ ನೆಡೆಯುತ್ತಿರುವ ಗ್ರಾಮ ಪಂಚಾಯತ್ ಚುನಾವಣೆ ಶಾಂತಿಯುತವಾಗಿ ನೆಡೆಯಬೇಕು ಹಾಗೂ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕೆಲಸ ಮಾಡುತ್ತಿರುವ ನಮ್ಮ ಪಕ್ಷದ ಕಾರ್ಯಕರ್ತರು, ಹಿತೈಶಿಗಳು ಮತ್ತು ಮುಖಂಡರುಗಳಿಳಿಗೆ ಹೆಚ್ಚಿನ ಶಕ್ತಿ ದೊರಕುವಂತಾಗಲಿ ಎಂದು ಹರಕೆ ಸಲ್ಲಿಸಿದ್ದೇನೆ.
ಶಾಸಕರ ಪತ್ನಿ ಲಕ್ಷ್ಮೀ ಮಂಜುನಾಥ್, ಜೆಡಿಎಸ್ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ, ಬಗಿನಗೆರೆ ರಾಮಣ್ಣ, ಮಾಜಿ ಗ್ರಾ,ಪಂ ಅಧ್ಯಕ್ಷ ಎಚ್.ಜಿ ತಮ್ಮಣ್ಣಗೌಡ, ಹನುಮಾಪುರ ಚಿಕ್ಕಣ್ಣ, ಕೆಡಿಪಿ ಸದಸ್ಯ ಟಿ.ಜಿ ವೆಂಕಟೇಶ್, ದಂಡಿಗೆಪುರ ಅಶೋಕ್, ತಾ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ, ಪುರಸಭಾ ಉಪಾಧ್ಯಕ್ಷ ರಹಮತ್, ಸದಸ್ಯರಾದ ಎಂ.ಎನ್ ಮಂಜು, ಹೇಮಲತಾ ನಾಗರಾಜು, ಅನಿಲ್ಕುಮಾರ್, ಜ್ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿಜಯ್ ಕುಮಾರ್, ಮರೂರು ಸಾಗರ್ಗೌಡ, ಚಿಕ್ಕಕಲ್ಯಾ ರಮೇಶ್, ತಿಪ್ಪಸಂದ್ರ ರಘು, ಮತ್ತು ಇನ್ನು ಮುಂತಾದವರಿದ್ದರು.