Thursday, July 7, 2022

Latest Posts

ಖಾತೆ ಬದಲಾವಣೆ: ಅಸಮಾಧಾನ ಹೊರಹಾಕಿದ ಶ್ರೀರಾಮುಲು

ಬೆಂಗಳೂರು ಶ್ರೀರಾಮಲು ಅವರ ಆರೋಗ್ಯ  ಖಾತೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಹಿಸಲಾಗಿದ್ದು, ಈ ಬಗ್ಗೆ ಶ್ರೀರಾಮುಲು ಸೇರಿದಂತೆ ಹಲವು ಶಾಸಕರು ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತಂತೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು ಈ ಸಮಯದಲ್ಲಿ ಮುಖ್ಯಮಂತ್ರಿಯವರು ಖಾತೆ ಬದಲಾವಣೆಮಾಡಿದ್ದು ಸರಿಯಲ್ಲ. ಈ ಸಮಯದಲ್ಲಿ ಖಾತೆ ಬದಲಾವಣೆ ಮಾಡಿದ್ದರಿಂದ ಜನರಿಗೆ ತಪ್ಪು ಸಂದೇಶ ಹೋಗುತ್ತದೆ. ನಾನೇನು ಕೆಲಸ ಮಾಡಿಲ್ಲ ಹಾಗಾಗಿ ಬದಲಾವಣೆ ಮಾಡಿದ್ದಾರೆಂಬ ಸಂದೇಶ ರವಾನೆಯಾಗುತ್ತದೆ. ಸಂಪುಟ ಪುನರ್ ರಚನೆಯ ವೇಳೆಯಲ್ಲಿ ಖಾತೆ ಬದಲಾವಣೆ ಮಾಡಿದ್ದರೇ ಸರಿ ಆಗುತ್ತಿತ್ತು ಎಂದು ಬೇಸರ ಹೊರಹಾಕಿದ್ದಾರೆ.

ಸಿಎಂ ದಿಢೀರ್ ಖಾತೆ ಬದಲಾವಣೆ ಮಾಡಿದ್ದರ ಬಗ್ಗೆ ಗಮನಕ್ಕೆ ಬಂದಿಲ್ಲ  ಎಂದು ಶ್ರೀರಾಮುಲು ಹೇಳಿದ್ದಾರೆ. ಅಲ್ಲದೆ ಇಂದು ಮಧ್ಯಾಹ್ನ ವೇಳೆಗೆ ಸಿಎಂ ಅವರನ್ನು ಭೇಟಿ ಮಾಡಲಿರುವುದಾಗಿಯೂ ಹೇಳಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss