Wednesday, July 6, 2022

Latest Posts

ಖಾತೆ ಹಂಚಿಕೆ ವಿಷಯದಲ್ಲಿ ಯಾರಿಗೂ ಅಸಮಾಧಾನವಿಲ್ಲ: ಸಿಎಂ ಯಡಿಯೂರಪ್ಪ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಖಾತೆ ಹಂಚಿಕೆ ವಿಷಯದಲ್ಲಿ ಸಚಿವರಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಗೆ ನಗು ಮುಖದಲ್ಲೇ ಆಗಮಿಸಿದ ಸಿಎಂ, ಸಚಿವ ಜೆ.ಸಿ. ಮಾಧುಸ್ವಾಮಿ, ಕೆ. ಗೋಪಾಲಯ್ಯ ಎಲ್ಲರೂ ಸಮಾಧಾನವಾಗಿದ್ದಾರೆ. ಯಾರಿಗೂ ಅಸಮಾಧಾನವಾಗಿಲ್ಲ. ಸ್ವಲ್ಪ ಸಣ್ಣಪುಟ್ಟ ಅಸಮಾಧಾನ ಇರಬಹುದು. ಅವರೆಲ್ಲರನ್ನೂ ಕರೆದು ನಾನು ಮಾತನಾಡುತ್ತೇನೆ. ಸಂಪುಟ ರಚಿಸುವುದು, ಖಾತೆ ಹಂಚುವುದು ಸುಲಭದ ಕೆಲಸವಲ್ಲ. ಅವರು ಸ್ವಲ್ಪ ದಿನ ಕೆಲಸ ಮಾಡಲಿ. ಆ ಇಲಾಖೆ ಸರಿಯಾಗಲಿಲ್ಲ ಅಂದರೆ ಆಮೇಲೆ ಉತ್ತಮ ಖಾತೆ ನೀಡೋಣ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss