Saturday, August 13, 2022

Latest Posts

ಖಾಯಂ ಅನುದಾನಕ್ಕೆ ಕಲಾವಿದ ಬಸಲಿಂಗಯ್ಯ ಆಗ್ರಹ

ಧಾರವಾಡ: ನಾಡು-ನುಡಿ ಕಲೆ ಉಳಿವಿಗೆ ಶ್ರಮಿಸುವ ಸಾಮಾನ್ಯ ವರ್ಗದ ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿ ಹಾಗೂ ಜನಪದ ರಂಗಭೂಮಿ ಸಂಘ-ಸಂಸ್ಥೆಗಳಿಗೆ ಕಾಯಂ ಅನುದಾನ ನೀಡುವಂತೆ ಜಾನಪದ ಸಂಶೋಧನಾ ಸಂಸ್ಥೆ ಅಧ್ಯಕ್ಷ ಬಸಲಿಂಗಯ್ಯ ಹಿರೇಮಠ ಆಗ್ರಹಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರಾದ ಸಿ.ಟಿ. ರವಿ ಅವರು ಎಸ್ಸಿ-ಎಸ್ಟಿ ಸಂಘ-ಸಂಸ್ಥೆಗಳಿಗೆ ರೂ. ೭ ಕೋಟಿ, ಸಾಮಾನ್ಯ ವರ್ಗದ ಸಂಸ್ಥೆಗಳಿಗೆ ರೂ.೧೦ ಕೋಟಿ ಅನುದಾನ ನೀಡಿರುವುದು ಸ್ವಾಗತಾರ್ಹ ಎಂದರು.
ಆದರೆ, ಸಾಮಾನ್ಯ ವರ್ಗದಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಸಂಘ-ಸಂಸ್ಥೆಗಳಿವೆ. ಹೀಗಾಗಿ ಸರ್ಕಾರ ನೀಡಿದೆ ಅನುದಾನ ಸಾಕಾಗಲ್ಲ. ಆದ್ದರಿಂದ ಕನಿಷ್ಠ ರೂ. ೨೫ ಕೋಟಿ ನೀಡುವಂತೆ ಒತ್ತಾಯ ಮಾಡಿದರು.
ಕಲಾವಿದರಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ಕಲಾವಿದರಿಗೆ ಜಾತಿ ಪಟ್ಟ ಸಲ್ಲ. ಜಾತಿವಾರು ಕಲಾವಿದರನ್ನು ಒಡೆಯುವುದು ಮೊದಲು ಸರ್ಕಾರ ಕೈಬಿಡಬೇಕು. ಉತ್ತಮ ಕೆಲಸ ಮಾಡುವ ಕಲಾವಿದರಿಗೆ ಹಾಗೂ ಸಂಘ-ಸಂಸ್ಥೆಗಳಿಗೆ ಅನುದಾನ ಹೆಚ್ಚಿಸಬೇಕು ಎಂದರು.
ಅನುದಾನ ನೀಡುವಲ್ಲಿ ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಕಲಾವಿದರ ನಡುವೆ ತಾರತಮ್ಯ ಆಗುತ್ತಿದೆ. ದಕ್ಷಿಣ ಕೆಲ ಸಂಘ-ಸಂಸ್ಥೆಗಳಿಗೆ ಕಾಯಂ ಅನುದಾನ ನೀಡಿತ್ತಿದೆ. ಹಾಗೇ ನಮಗೂ ನೀಡಬೇಕೆಂದು ಆಗ್ರಹಿಸಿದರು.
ಪ್ರತಿ ವರ್ಷ ಸಂಘದಿಂದ ನಡೆಸುವ ಕಾರ್ಯಕ್ರಮ ವರದಿ, ಲೆಕ್ಕಪತ್ರ ಮಾಹಿತಿ ಪಡೆಯುವ ಸರ್ಕಾರ ಮೂಗಿಗೆ ತುಪ್ಪ ಸವರುವ ಕೆಲಸದ ಬದಲಿಗೆ ೧೫-೨೦ ವರ್ಷಗಳಿಂದ ಕಲಾ ಸೇವೆಯಲ್ಲಿ ತೊಡಗಿದ ಸಂಸ್ಥೆಗೆ ಅನುದಾನ ಹೆಚ್ಚಿಸುವಂತೆ ಮನವಿ ಮಾಡಿದರು.
ಇನ್ನೂ ಕೊರೋನಾ ಸಂದರ್ಭದಲ್ಲಿ ಸರ್ಕಾರ ಕಲಾವಿದರಿಗೆ ಘೋಷಿಸಿದ ರೂ.೨೦೦೦ ಸಾವಿರ‌ ಪರಿಹಾರ ಉತ್ತರ ಕರ್ನಾಟಕದ ಬಹುತೇಕ ಕಲಾವಿದರಿಗೆ ಬಂದಿಲ್ಲ. ತಕ್ಷಣ ಪರಿಶೀಲನೆ ನಡೆಸಿ, ಖಾತೆಗೆ ಹಣ ಜಮಾವಣೆಗೆ ಕ್ರಮ ಕೈಗೊಳ್ಳಲಾಯಿತು ಕೋರಿದರು.
ಕಲಾವಿದರಿಗೆ ಯಾವುದೇ ಜಾತಿ ಇಲ್ಲ. ಬರಗೂರ ರಾಮಚಂದ್ರಪ್ಪ ವರದಿ ಇದನ್ನೇ ಹೇಳಿದೆ. ಈ ವರದಿ ಅನುಷ್ಠಾನಕ್ಕೆ ತರಬೇಕು. ಜಾತಿವಾರು ಸಂಘ-ಸಂಸ್ಥೆ ಒಡೆಯುವುದು ಬಿಡಬೇಕು.
೧೫-೨೦ ವರ್ಷದಿಂದ ಕಲಾ ಸೇವೆ ಮಾಡುವ ಸಂಸ್ಥೆಗಳಿಗೆ ಕಾಯಂ ಅನುದಾನ ಹಾಗೂ ನಿಗದಿತ ಅನುದಾನ ನೀಡಬೇಕೆಂದು ಆಗ್ರಹಿಸಿದರು.
ಸುದ್ದಿ ಗೋಷ್ಠಿಯಲ್ಲಿ ಬಿ.ಐ.ಈಳಗೇರ, ಸಂತೋಷ ಮಹಾಲೆ, ಬಸವೇಶ್ವರಿ ಹಿರೇಮಠ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss