ಖಾಸಗಿ ಸಹಭಾಗಿತ್ವದಲ್ಲಿ ಶಾಲಾಭಿವೃದ್ಥಿ: ಆಸಕ್ತ ಉದ್ಯಮಿಗಳಿಂದ ಜೀರ್ಣೋದ್ಧಾರ: ಸಚಿವ ಸುರೇಶ ಕುಮಾರ್

0
77

ಬೆಂಗಳೂರು: ಸಂಪೂರ್ಣ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು ಹಲವು ಉದ್ಯಮಿಗಳು ಮುಂದೆ ಬಂದಿದ್ದಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ವಿಧಾನಪರಿಷತ್ ನಲ್ಲಿ ಸ್ಪಷ್ಟಪಡಿಸಿದರು.

ಪರಿಷತ್ ನ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯರಾದ ಶ್ರೀಕಂಠೇ ಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲಿಷ್ ಹಾಗೂ ಕಂಪ್ಯೂಟರ್ ಹೇಳಿಕೊಡಲು ವಾರಾಂತ್ಯದಲ್ಲಿ ಇಂಜಿನಿಯರ್ ಉದ್ಯೋಗಿಗಳು ಮುಂದೆ ಬರುತ್ತಿದ್ದಾರೆ. ಅವರಿಗಾಗಿ ಆಪ್ ತಯಾರು ಮಾಡಲಾಗುತ್ತದೆ ಎಂದರು.

ಮಳೆಯಿಂದ  6196 ಶಾಲೆಗಳಿಗೆ ಹಾನಿ: ರಾಜ್ಯದಲ್ಲಿ ಅಧಿಕ ಮಳೆಯಿಂದಾಗಿ 6196 ಶಾಲೆಗಳಿಗೆ ಹಾನಿಯಾಗಿದೆ. ಅಲ್ಪ ಪ್ರಮಾಣದಲ್ಲಿ ಹಾನಿಯಾದ ಶಾಲೆಗಳ ದುರಸ್ತಿಗೆ 199 ಕೋಟಿ ಬಿಡುಗಡೆ ಮಾಡಲಾಗಿದೆ. ದುರಸ್ಥಿ ಮಾಡಲಾಗದೆ ಸಂಪೂರ್ಣ ಬಿದ್ದು ಹೋಗಿರುವ ಶಾಲೆಗಳಿಗೆ  ಹೆಚ್ಚಿನ ಅನುದಾನ ಬೇಕಾಗಿರುವುದರಿಂದ ಹೊಸದಾಗಿ ನಿರ್ಮಾಣ ಮಾಡಲು ದಾನಿಗಳು ಮುಂದೆ ಬಂದಿದ್ದಾರೆಂದು ತಿಳಿಸಿದರು.

ಕಟ್ಟಡ ನಿರ್ಮಾಣದ ಜವಾಬ್ಧಾರಿ: ಒಂದು ಶಾಲೆ ಯನ್ನು ಒಬ್ಬರು ನಿರ್ಮಾಣ ಮಾಡುವ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಇನ್ನು ಕೆಲವರು ಲ್ಯಾಬ್‌ಗಳು, ಶೌಚಾಲಯ, ಗ್ರಂಥಾಲಯ ಹೀಗೆ ಪ್ರತ್ಯೇಕ ಕೊಡುಗೆ ನೀಡಲು ಆಸಕ್ತಿ ವಹಿಸಿದ್ದಾರೆಂದು ಹೇಳಿದರು.

ಶುಕ್ರವಾರ, ಶನಿವಾರದಂದು ಸಾಪ್ಟ್‌ವೇರ್ ಉದ್ಯೋಗಿಗಳು ಕಂಪ್ಯೂಟರ್ ಹೇಳಿಕೊಡಲು ಹಾಗೂ ಸ್ಪೋಕನ್ ಇಂಗ್ಲಿಷ್ ತರಗತಿ ಮಾಡಲು ಮುಂದುಬಂದಿದ್ದಾರೆ. ದಾನಿಗಳಿಗೆ ಸಹಾಯವಾಗಲು ಆಪ್ ತಯಾರಿಸಲಾಗುತ್ತಿದೆ. ಏ.2ನೇ ವಾರದಲ್ಲಿ ಸಭೆ ಕರೆದು ಸರ್ಕಾರದಿಂದ ಅಡಚಣೆಯಾಗದಂತೆ ಕ್ರಮ ವಹಿಸುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ತಿಳಿಸಿದರು.

LEAVE A REPLY

Please enter your comment!
Please enter your name here