Wednesday, July 6, 2022

Latest Posts

ಖಿನ್ನತೆಗೆ ಒಳಗಾಗಿದ್ದೇನೆ, ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದೇನೆ: ಮೋದಿಗೆ ಟ್ಯಾಗ್ ಮಾಡಿದ ನಟಿ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೆಲವು ಜನರಿಂದ ಕಿರುಕುಳ ದುರಿಸುತ್ತಿದ್ದೇನೆ. ಇದರಿಂದ ನಾನು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದೇನೆ…
ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ ಕಾಲಿವುಡ್ ನಟಿ ಮೀರಾ ಮಿಥುನ್ ಟ್ವೀಟ್ ಮಾಡಿದ್ದಾರೆ.
ನನ್ನ ಖಿನ್ನತೆಯನ್ನು ಎಲ್ಲಾ ಸಾಮಾಜಿಕ ಜಾಲತಾಣ ವೇದಿಕೆಯಲ್ಲೂ ರೆಕಾರ್ಡ್ ಮಾಡಿದ್ದೇನೆ. ಆದರೂ ನನ್ನ ಮೇಲಿನ ಕಿರುಕುಳ ಮಾತ್ರ ಕಡಿಮೆ ಆಗಿಲ್ಲ. ನನ್ನ ಮಾನಸಿಕ ಆರೋಗ್ಯ ಹದಗೆಡುತ್ತಿದೆ ಎಂದು ಬರೆದುಕೊಂಡಿರುವ ನಟಿ, ಕಳೆದ ಮೂರು ವರ್ಷದಿಂದ ನನಗೆ ಕಿರುಕುಳ ನೀಡಲಾಗುತ್ತಿದೆ. ಆದ್ದರಿಂದ ನಾನು ಜಾಲತಾಣದಲ್ಲಿ ಸಕ್ರಿಯಳಾಗಿರಲಿಲ್ಲ. ಆದರೂ ನನ್ನ ಸಾಮರ್ಥ್ಯದಿಂದ ಮತ್ತೆ ಜಾಲತಾಣದಲ್ಲಿ ಸಕ್ರಿಯಳಾಗಿದ್ದೇನೆ. ಏಕೆಂದರೆ, ನನ್ನ ಅಭಿಮಾನಿಗಳು, ಜನರು, ಮತ್ತು ನನ್ನ ಕೆಲಸದ ಬಗ್ಗೆ ಸಂವಹನ ನಡೆಸುವ ಮಾಧ್ಯಮ ಇದಾಗಿದೆ. ಆದರೆ, ಭಾರತದಲ್ಲಿರುವ ಸ್ವಜನಪಕ್ಷಪಾತ ನನ್ನನ್ನು ಕೊಲ್ಲುತ್ತಿದೆ. ನಾನೀಗ ಸಂಪೂರ್ಣ ಖಿನ್ನತೆಗೆ ಒಳಗಾಗಿದ್ದೇನೆ. ನನಗಾಗುತ್ತಿರುವ ನೋವನ್ನು ತಡೆಯಲೇಬೇಕಿದೆ. ಹೀಗಾಗಿ ನಾನು ಸಾಯಲೇಬೇಕಿದೆ ಎಂದು ಬರೆದುಕೊಂಡಿದ್ದಾರೆ.
ಒಂದು ವೇಳೆ ನಾನು ಆತ್ಮಹತ್ಯೆ ಮಾಡಿಕೊಂಡರೆ, ನನ್ನ ಸಾವಿಗೆ ಕಾರಣರಾದ ಎಲ್ಲರನ್ನು ನೇಣಿಗೆ ಏರಿಸಬೇಕು ಎಂದು ನರೇಂದ್ರ ಮೋದಿ ಅವರಿಗೆ ಮೀರಾ ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ. ಅಲ್ಲದೆ ಕಾಮೆಂಟ್‌ಗಳು ನನ್ನನ್ನು ಸಾಯುವಂತೆ ಮಾಡಿವೆ. ನಾನು ವೈಫಲ್ಯಳು ಎಂಬ ಭ್ರಮೆಯನ್ನು ಸೃಷ್ಟಿ ಮಾಡಿದೆ. ನಾನು ಗೆಲುತ್ತೇನೆಂದರು, ಈ ಕಾಮೆಂಟ್‌ಗಳು ಮಾತ್ರ ನಿಲ್ಲುತ್ತಿಲ್ಲ. ನನ್ನನ್ನು ಸಾವಿನ ಕಡೆಗೆ ನೂಕುತ್ತಿದೆ. ದಯವಿಟ್ಟು ನನಗೆ ಯಾರಾದರೂ ಸಹಾಯ ಮಾಡಿ ಎಂದು ಮೀರಾ ಕೇಳಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss