ಹೊಸದಿಗಂತ ಆನ್ಲೈನ್ ಡೆಸ್ಕ್:
ಲೈಂಗಿಕ ಆರೋಗ್ಯ ಅಂಕಣ ಬರೆಯುತ್ತಿದ್ದ ಖ್ಯಾತ ಅಂಕಣಕಾರ ಡಾ.ಮಹಿಂದರ್ ವಾತ್ಸಾ ನಿಧನರಾಗಿದ್ದಾರೆ.
ಮುಂಬೈ ಮಿರರ್ನಲ್ಲಿ ಆಸ್ಕ್ ದಿ ಎಕ್ಸ್ಪರ್ಟ್ ಮೂಲಕ ಜನರ ಮನೆಮಾತಾಗಿದ್ದ ಮಹಿಂದರ್ ವಾತ್ಸಾ ಇನ್ನಿಲ್ಲ. ಅವರಿಗೆ 96 ವರ್ಷ ವಯಸ್ಸಾಗಿದ್ದು, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
1960 ರಲ್ಲಿ ಅಂಕಣಕಾರರಾಗಿ ವೃತ್ತಿ ಜೀವನ ಆರಂಭಿಸಿದ ವಾತ್ಸಾ ಅವರು ಜನರ ಮನೆ ಮಾತಾಗಿದ್ದರು. ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುತ್ತಿದ್ದರು. ಎಸ್ಪಿಎಐನಲ್ಲಿ ಸಲಹೆಗಾರರಾಗಿ ಕೆಲಸ ಮಾಡುವಾಗ, ದೇಶದಲ್ಲಿ ಲೈಂಗಿಕ ಸಮಾಲೋಚನೆ ಮತ್ತು ಶಿಕ್ಷಣ ಕಾರ್ಯಕ್ರಮವನ್ನು ಜಾರಿಗೆ ತರಬೇಕು ಎಂದು ಸಲಹೆ ನೀಡಿದ್ದರು. ಅವರ ಸಲಹೆ ಮೇರೆಗೆ 1974 ರಲ್ಲಿ ಭಾರತದ ಮೊದಲ ಲೈಂಗಿಕ ಶಿಕ್ಷಣ,ಆಪ್ತ ಸಮಾಲೋಚನೆ ಮತ್ತು ಚಿಕಿತ್ಸಾ ಕೇಂದ್ರ ಆರಂಭಗೊಂಡಿತ್ತು.