Wednesday, June 29, 2022

Latest Posts

ಖ್ಯಾತ ಆಂಕೊಲಾಜಿಸ್ಟ್ ಡಾ.ವಿ.ಶಾಂತಾ ಇನ್ನಿಲ್ಲ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಖ್ಯಾತ ಆಂಕೊಲಾಜಿಸ್ಟ್, ಕ್ಯಾನ್ಸರ್ ಇನ್​ಸ್ಟಿಟ್ಯೂಟ್ ಆಫ್ ಅಡಾಯರ್ ಅಧ್ಯಕ್ಷರು ಹಾಗೂ  ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದ ಡಾ.ವಿ.ಶಾಂತಾ (94) ನಿಧನರಾಗಿದ್ದಾರೆ.

ಹೃದಯದ ಸಮಸ್ಯೆಗಳಿಂದ ಬಳಸಲುತ್ತಿದ್ದ ಶಾಂತ ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಚನ್ನೈನಲ್ಲಿ ಇಂದು ನಿಧನರಾಗಿದ್ದಾರೆ.

ಚೆನ್ನೈನಲ್ಲಿ ಭಾರತದ ವಿಶೇಷ ವೈಜ್ಞಾನಿಕ ಕುಟುಂಬದಲ್ಲಿ ಜನಿಸಿದ ಶಾಂತಾ ಅವರು ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಎಂಡಿ ಪಧವೀದರೆ. ಮದ್ರಾಸ್‌ನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರಾಗಿ ಕಾರ್ಯ ನಿರ್ವಹಿಸಿದ್ದು, ಪ್ರಸ್ತುತ ಚೆನ್ನೈನ ಕ್ಯಾನ್ಸರ್ ಇನ್​ಸ್ಟಿಟ್ಯೂಟ್ (ಡಬ್ಲ್ಯುಐಎ) ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಕಾರ್ಯನಿರ್ಹಿಸುತ್ತಿದ್ದರು.

ಶಾಂತಾ ಅವರಿಗೆ ಭಾರತ ಸರ್ಕಾರದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಮ್ಯಾಗ್ಸೆಸೆ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, ಪದ್ಮ ವಿಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss