ಹೊಸದಿಗಂತ ಆನ್ಲೈನ್ ಡೆಸ್ಕ್:
ಖ್ಯಾತ ಉರ್ದುಕವಿ, ವಿಮರ್ಶಕ ಹಾಗೂ ಪದ್ಮಶ್ರೀ ಪುರಸ್ಕೃತ ಶಂಸುರ್ ರಹಮಾನ್ ಫಾರುಖಿ ನಿಧನರಾಗಿದ್ದಾರೆ.
೮೫ವರ್ಷದ ಫಾರುಖಿ ಅವರು ಅಲಹಾಬಾದ್ನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ತಿಂಗಳ ಹಿಂದೆ ಕೊರೋನಾ ಸೋಂಕು ಬಾಧಿಸಿದ್ದು, ನ.23 ರಂದು ಗುಣಮುಖರಾಗಿ ಮರಳಿ ಬಂದಿದ್ದರು. ಆದರೆ ಸೋಂಕಿನ ನಂತರ ಅವರಿಗೆ ಕಣ್ಣಿನಲ್ಲಿ ಫಂಗಲ್ ಇನ್ಫೆಕ್ಷನ್ ಆಗಿತ್ತು. ಆಸ್ಪತ್ರೆಯಿಂದ ಏರ್ ಆಂಬುಲೆನ್ಸ್ ಮೂಲಕ ಮನೆಗೆ ಬಂದ ಕೇವಲ ಅರ್ಧ ಗಂಟೆಯಲ್ಲಿಯೇ ಅವರ ಆರೋಗ್ಯ ಬಿಗಡಾಯಿಸಿ ಕೊನೆಯುಸಿರೆಳೆದಿದ್ದಾರೆ.