Thursday, June 30, 2022

Latest Posts

ಖ್ಯಾತ ಪಿಟೀಲು ವಾದಕ ಟಿ.ಎನ್ ಕೃಷ್ಣನ್ ಇನ್ನಿಲ್ಲ: ಪ್ರಧಾನಿ ಮೋದಿ ಸಂತಾಪ

ಚೆನ್ನೈ: ಪ್ರಖ್ಯಾತ ಪಿಟೀಲು ವಾದಕ ಟಿ.ಎನ್ ಕೃಷ್ಣನ್(92) ನಿಧನರಾಗಿದ್ದಾರೆ.
ಕೃಷ್ಣನ್ ಅವರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸಂಗೀತ ಪ್ರೇಮಿಗಳನ್ನು ಅಗಲಿದ್ದಾರೆ.

ಕೃಷ್ಣನ್ ಅವರ ಅಗಲಿಕೆಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ಖ್ಯಾತ ಪಿಟೀಲು ವಾದಕ ಶ್ರೀ ಟಿ.ಎನ್.ಕೃಷ್ಣನ್ ಅವರ ನಿಧನವು ಸಂಗೀತ ಜಗತ್ತಿನಲ್ಲಿ ದೊಡ್ಡ ನಷ್ಟವಾಗಿದೆ. ಅವರ ಕೃತಿಗಳು ನಮ್ಮ ಸಂಸ್ಕೃತಿಯ ವ್ಯಾಪಕವಾದ ಭಾವನೆಗಳನ್ನು ಮತ್ತು ಎಳೆಗಳನ್ನು ಸುಂದರವಾಗಿ ಬಣ್ಣಿಸಿದ್ದರು. ಅವರು ಯುವ ಸಂಗೀತಗಾರರಿಗೆ ಅತ್ಯುತ್ತಮ ಮಾರ್ಗದರ್ಶಕರಾಗಿದ್ದರು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನೋವನ್ನು ತಡೆಯುವ ಶಕ್ತಿ ಭಕವಂತ ಕರುಣಿಸಲಿ. ಓಂ ಶಾಂತಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss