Friday, July 1, 2022

Latest Posts

ಖ್ಯಾತ ಶಾಸ್ತ್ರೀಯ ಸಂಗೀತಕಾರ, ‘ಪದ್ಮ’ಗಳ ಪುರಸ್ಕೃತ ಡಾ.ಗುಲಾಂ ಮುಸ್ತಫಾ ಖಾನ್ ಇನ್ನಿಲ್ಲ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಸುಪ್ರಸಿದ್ಧ ಹಿಂದೂಸ್ಥಾನ ಸಂಗೀತ ಕಲಾವಿದ, ಪದ್ಮವಿಭೂಷಣ, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಸಂಗೀತಕಾರ ಉಸ್ತಾದ್​ ಡಾ.ಗುಲಾಂ ಮುಸ್ತಫಾ ಖಾನ್ (90) ಅವರು ಇಂದು ನಿಧನರಾಗಿದ್ದಾರೆ.
ಖಾನ್ ಅವರ ಸೊಸೆ ನಮ್ರತಾ ಗುಪ್ತಾ ಖಾನ್ ಅವರು ಈ ಕುರಿತಂತೆ ಮಾಹಿತಿ ಹಂಚಿಕೊಂಡಿದ್ದು, ಡಾ.ಗುಲಾಂ ಮುಸ್ತಾಫಾ ಖಾನ್(90) ಅವರು ತಮ್ಮ ಬಾಂದ್ರಾ ನಿವಾಸದಲ್ಲಿ 12.37ಕ್ಕೆ ಕೊನೆಯುಸಿರು ಎಳೆದರು ಎಂಬುದಾಗಿ ತಿಳಿಸಿದ್ದಾರೆ.
1931ರ ಮಾರ್ಚ್ 3ರಂದು ಉತ್ತರ ಪ್ರದೇಶದ ಬದೌನ್ ನಲ್ಲಿ ಜನಿಸಿದ ಖಾನ್, ನಾಲ್ವರು ಸಹೋದರರು ಮತ್ತು ಮೂವರು ಸಹೋದರಿಯರ ಕುಟುಂಬದಲ್ಲಿ ಹಿರಿಯ ಮಗನಾಗಿದ್ದನು. ಅವರ ತಂದೆ, ‘ಉಸ್ತಾದ್ ವಾರಿಸ್ ಹುಸೇನ್ ಖಾನ್’ ಖ್ಯಾತ ಸಂಗೀತ ನಿರ್ದೇಶಕರಾದ ಉಸ್ತಾದ್ ಮುರ್ರೆದ್ ಬಕ್ಷ್ ಅವರ ಮಗ, ಅವರ ತಾಯಿ ಸಬ್ರಿ ಬೇಗಂ, ಸಂಗೀತದ ರಾಂಪುರ-ಸಹಸ್ವಾನ್ ಘರಾನಾ ಸಂಸ್ಥಾಪಕ ರಾದ ಉತದ್ ಇನಾಯತ್ ಹುಸೇನ್ ಖಾನ್ ರ ಮಗಳಾಗಿ ಖ್ಯಾತಿ ಗಳಿಸಿದರು.
ತಂದೆಯಿಂದ ಶಾಸ್ತ್ರೀಯ ಸಂಗೀತ ತರಬೇತಿ ಪಡೆದ ಖಾನ್, ನಂತರ ತಮ್ಮ ಸೋದರ ಸಂಬಂಧಿ, ನಿಸಾರ್ ಹುಸೇನ್ ಖಾನ್ ಅವರ ನೇತೃತ್ವದಲ್ಲಿ ಸಂಗೀತ ಕಲಿತಿದ್ದರು. 1991ರಲ್ಲಿ ಪದ್ಮಶ್ರೀ ಪ್ರಶಸ್ತಿ, ನಂತರ 2006ರಲ್ಲಿ ಪದ್ಮಭೂಷಣ, 2018ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 2003ರಲ್ಲಿ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪ್ರಾಕ್ಟಿಕಲ್ ಕಲಾವಿದರಿಗೆ ನೀಡಲಾಗುವ ಅತ್ಯುನ್ನತ ಭಾರತೀಯ ಗೌರವ ಸಂದಿವೆ.
2019ರಲ್ಲಿ ಬ್ರೈನ್ ಸ್ಟ್ರೋಕ್​ಗೆ ಒಳಗಾಗಿದ್ದ ಖಾನ್, ದೇಹದ ಎಡಭಾಗವು ಪಾರ್ಶ್ವವಾಯುವಿಗೆ ತುತ್ತಾಗಿತ್ತು. ಅಂದಿನಿಂದಲೂ 24 ಗಂಟೆ ನರ್ಸ್ ಒಬ್ಬರು ಮನೆಯಲ್ಲಿಯೇ ಅವರನ್ನು ನೋಡಿಕೊಳ್ಳುತ್ತಿದ್ದರು. ಇಂದು ಮಧ್ಯಾಹ್ನ ಮಸಾಜ್ ಮಾಡುವಾಗ ವಾಂತಿಯಾಯಿತು, ವೈದ್ಯರು ಬಂದು ಅವರ ಆರೋಗ್ಯ ಪರೀಕ್ಷೆಗೆ ಒಳಪಡಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss