ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಸಮಾಜ ಸೇವಕ ಬಾಬಾ ಅಮ್ಟೆ ಅವರ ಮೊಮ್ಮಗಳು ಮತ್ತು ಆನಂದ್ ವನ್ ನಲ್ಲಿರುವ ಮಹಾರೋಗಿ ಸೇವಾ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಡಾ.ಶೀತಲ್ ವಿಕಾಸ್ ಅಮ್ಟೆ ಕಾರಜಿಗಿ ಇಂದು ಚಂದ್ರಾಪುರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದ ಡಾ.ಶೀತಲ್ ವಿಕಾಸ್ ಅಮ್ಟೆ ಅವರನ್ನು ಪರೀಕ್ಷಿಸಿದ ವರೋರಾ ಆಸ್ಪತ್ರೆಯ ವೈದ್ಯರು ಅವರು ಮೃತರಾದರೆಂದು ಘೋಷಿಸಿದರು.
ಡಾ.ಶೀತಲ್ ಅವರು ಇತ್ತೀಚೆಗೆ ಮಹಾರೋಗಿ ಸೇವಾ ಸಮಿತಿಯ ಅಕ್ರಮಗಳ ಬಗ್ಗೆ ಆರೋಪಗಳನ್ನು ಹೊರಿಸಿದ್ದರು ಮತ್ತು ಟ್ರಸ್ಟ್ ಮ್ಯಾನೇಜ್ಮೆಂಟ್ ಮತ್ತು ಅವರ ಕುಟುಂಬವನ್ನು ದೂಷಿಸಿದ್ದರು.ಈ ಕುರಿತು ವೀಡಿಯೊವನ್ನು ಆಕೆಯ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಲಾಗಿದ್ದು, ನಂತರ ಅದನ್ನು ಎರಡು ಗಂಟೆಗಳಲ್ಲಿ ತೆಗೆದುಹಾಕಲಾಗಿತ್ತು.
ಬಳಿಕ ನವೆಂಬರ್ 24 ರಂದು ಡಾ. ಶೀತಲ್ ಅವರ ತಂದೆ ಡಾ. ವಿಕಾಸ್ ಅಮ್ಟೆ ಮತ್ತು ಅವರ ಸಹೋದರ ಡಾ.ಪ್ರಕಾಶ್ ಅಮ್ಟೆ ಅವರು ಜಂಟಿ ಹೇಳಿಕೆ ನೀಡಿದ್ದರು.ಈ ಪತ್ರದಲ್ಲಿ ಡಾ.ವಿಕಾಸ್ ಅಮ್ಟೆ, ಅವರ ಪತ್ನಿ ಡಾ.ಭಾರತಿ, ಡಾ.ಪ್ರಕಾಶ್ ಅಮ್ಟೆ ಮತ್ತು ಅವರ ಪತ್ನಿ ಡಾ.ಮಂದಾಕಿನಿ ಅಮ್ಟೆ ಅವರ ಸಹಿ ಇತ್ತು.