Tuesday, August 9, 2022

Latest Posts

ಗಂಗಾವತಿ- ದರೋಜಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ರೈಲ್ವೆ ಮಂಡಳಿ ಅಧ್ಯಕ್ಷರಿಗೆ  ಮನವಿ

ಬಳ್ಳಾರಿ: ಗಂಗಾವತಿ-ದರೋಜಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ.ಯಾದವ್ ಅವರಿಗೆ‌ ದೆಹಲಿಯಲ್ಲಿ ಮನವಿ ಸಲ್ಲಿಸಿದರು.
ಗಂಗಾವತಿಯಿಂದ ಬಳ್ಳಾರಿ ಜಿಲ್ಲೆಯ ದರೋಜಿಗೆ ಸೋಮಲಾಪೂರ ಮಾರ್ಗವಾಗಿ ರೈಲ್ವೆ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಇದರಂದ ಗಂಗಾವತಿ, ಕನಕಗಿರಿ, ಸಿಂಧನೂರು, ಕಾರಟಗಿ ಸೇರಿದಂತೆ ವ್ಯಾಪ್ತಿಯ ಪ್ರಯಾಣಿಕರಿಗೆ ಬಳ್ಳಾರಿ, ಗುಂತಕಲ್, ಶ್ರೀಶೈಲಂ, ತಿರುಪತಿ, ಬೆಂಗಳೂರು, ದೇಹಲಿ‌ ಸೇರಿದಂತೆ ನಾನಾ ಕಡೆ ತೆರಳಲು ಅನುಕೂಲವಾಗಲಿದೆ. ಸುಮಾರು 35 ಕಿ.ಮೀ.ಉದ್ದದ ಗಂಗಾವತಿ- ದರೋಜಿಗೆ ರೈಲ್ವೆ ಸಂಪರ್ಕ ಕಲ್ಪಿಸುವದರಿಂದ ಸ್ಥಳೀಯರಿಗೆ ಹೆಚ್ಚು ಅನುಕೂಲವಾಗಲಿದೆ. ಇದರ ಜೊತೆಗೆ ಹಂಪಿ, ಆನೆಗುಂದಿ‌ ಪ್ರವಾಸೋದ್ಯಮ ಅಭಿವೃದ್ಧಿಗೆ ಇನ್ನಷ್ಟು ಅನುಕೂಲವಾಗಲಿದೆ. ಸಂಸತ್ ಅಧಿವೇಶನದಲ್ಲಿ ಈ ಕುರಿತು ಗಮನಸೆಳೆದಿರುವೆ, ಆರೋಗ್ಯ ಖಾತೆ ಸಚಿವ ಬಿ.ಶ್ರೀರಾಮುಲು ಅವರೂ ರೈಲ್ವೆ ಮಂಡಳಿಗೆ ಮನವಿ ಸಲ್ಲಿಸಿ, ದರೋಜಿ-ಗಂಗಾವತಿ ರೈಲ್ವೆ ಮಾರ್ಗ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ ಎಂದು ಸಂಸದ ಕರಡಿ ಸಂಗಣ್ಣ ಅವರು ‌ಮನವಿ ಪತ್ರದಲ್ಲಿ‌ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss