ಗಂಗಾವತಿ: ಈ ಬಾರಿ ಮಳೆ ಬೆಳೆ ಚೆನ್ನಾಗಿ ಬಂದಿದೆ ಎನ್ನುವಷ್ಟರಲ್ಲಿ ಮಳೆ ಗಾಳೆಯ ರಬಸಕ್ಕೆ ಬೆಳೆದು ನಿಂತಿರುವ ಭತ್ತದ ಬೆಳೆಯು ಹಲವು ಕಡೆಗಳಲ್ಲಿ ನೆಲಕ್ಕೊರಳಿದೆ. ಇದರಿಂದ ರೈತರು ಮತ್ತೇ ಆತಂಕಕ್ಕಿಡಾಗಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಕೂಡ ಹೊರತಾಗಿಲ್ಲ. ಕಳೆದ ಒಂದು ವಾರದಿಂದ ಮಳೆ ಗಾಳಿಯಿಂದ ಗಂಗಾವತಿ, ಕನಕಗಿರಿ ಮತ್ತು ಕಾರಟಗಿ ಸೇರಿದಂತೆ ಅಖಂಡ ತಾಲೂಕಿನಲ್ಲಿ 7ಸಾವಿರ 671 ಹೆಕ್ಟರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಬೆಳೆ ನಾಶ ಕುರಿತು ಕಂದಾಯ ಇಲಾಖೆ ಕೃಷಿ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದು, ಇದರಲ್ಲಿ 160 ಹೆಕ್ಟರ್ ಪ್ರದೇಶದಲ್ಲಿ ಬೆಳೆ ನಾಶವಾಗಿದ್ದು ವರದಿಯಾಗಿದೆ.
ಗಾಯದ ಮೇಲೆ ಬರೆ:
ಮಳೆಯ ಅಭಾವದಿಂದ ತುಂಗಾಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸುಮಾರು ಆರೇಳು ವರ್ಷಗಳಿಂದ ಒಂದೇ ಬೆಳೆಗೆ ಸಿಮೀತವಾಗಿತ್ತು. ಆದರೆ 2019 ಮತ್ತು 2020ರಲ್ಲಿ ಎರಡ ಬೆಳೆಯ ನೀರಿಕ್ಷೆಯಲ್ಲಿದ್ದವರಿಗೆ ಮಳೆರಾಯನ ಅತಿವೃಷ್ಠಿ ಕಾರಣದಿಂದ ಹಾನಿಯಾಗುತ್ತಿದೆ. ಬೆಳೆದು ನಿಂತಿರುವ ಬೆಳೆ ನೆಲಕ್ಕೊರಗಿ ಕಾಳು ಉದುರುವ ಸಾದ್ಯತೆಯಿದೆ. ಪ್ರತಿ ಎಕರೆಗೆ ಇಳುವರಿ ಪ್ರಮಾಣ ಕಡಿಮೆಯಾಗುವುದು. ಒಂದೆಡೆ ಬೆಲೆಯಿಲ್ಲ ಇನ್ನೊಂದೆಡೆ ಇಳುವರಿ ಕಡಿಮೆಯಿಂದ ಗಾಯದ ಮೇಲೆ ಬರೆ ಎಳೆದಂತ್ತಾಗಿದೆ.
ರೋಗದ ಭೀತಿ:
ಈಗಾಗಲೇ ಭತ್ತಕ್ಕೆ ಕಣೆ ನೋಣ ಕಾಟ, ಕಾಡಿಗೆ ರೋಗ ಸೇರಿದಂತೆ ನಾನಾ ರೋಗಗಳ ನಿವಾರಣೆಗಾಗಿ ರೈತರು ದುಬಾರಿ ಬೆಲೆಯ ಕ್ರಿಮಿನಾಶಕ ಔಷಧಗಳನ್ನು ಸಿಂಪಡಿಸಿ ಹೈರಾಣಾಗಿದ್ದಾರೆ. ಆದರೆ ಹವಾಮಾನ ವೈಪರಿತ್ಯದಿಂದ ಮತ್ತೇ ಎಲ್ಲಿ ರೋಗಕ್ಕೆ ಭತ್ತಕ್ಕೆ ಕಾಡುತ್ತದೆ ಎನ್ನುವ ಭಯದಲ್ಲಿದ್ದಾರೆ. ಅಲ್ಲದೆ ಈ ಬಾರಿ ಉತ್ತಮ ನೀರಿಕ್ಷೆಯಲ್ಲಿದ್ದ ರೈತನ ಗೋಳು ಹೇಳ ತೀರದು.
ಕುಸಿತ ಭತ್ತದ ಬೆಲೆ:
ಗಂಗಾವತಿ ಮಾರುಕಟ್ಟೆಯು ಸೋನಾ ಮಸೂರಿ ಭತ್ತ ಬೆಳೆಗೆ ಹೆಸರುವಾಸಿಯಾಗಿದ್ದು, ಈ ಭಾಗದ ರೈತರಿಗೆ ಸೂಕ್ತ ಬೆಲೆ ಸಿಗುತ್ತಿತ್ತು. ಆದರೆ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ದಿಡೀರನೆ ಕುಸಿತ ಕಂಡಿದ್ದು ರೈತರು ಮತ್ತಷ್ಟು ಕಂಗಲನ್ನಾಗಿಸಿದೆ.