spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗಂಗೊಳ್ಳಿಯಲ್ಲಿ ನಾಗರಿಕರನ್ನು ಅಚ್ಚರಿಗೆ ತಳ್ಳಿತು ‘ಒಳಗೆ ಹಳದಿ ಭಾಗ ಇಲ್ಲದ ಒಂದು ಮೊಟ್ಟೆ’ಯ ಕಥೆ!

- Advertisement -Nitte

ಉಡುಪಿ: ಮೊಟ್ಟೆ ಅಂದ ಮೇಲೆ ಹೊರಗಡೆ ಕ್ಯಾಲ್ಸಿಯಂನಿಂದ ರಚನೆಯಾದ ಕವಚ, ಅದರೊಳಗೆ ಬಿಳಿ ಲೋಳೆ ಮತ್ತು ಕೊಬ್ಬು ಇರುವ ಹಳದಿ ಭಾಗ ಇರುತ್ತದೆ. ಆದರೆ ಉಡುಪಿ ಜಿಲ್ಲೆಯ ಗಂಗೊಳ್ಳಿಯ ಅಂಗಡಿಯೊಂದರಲ್ಲಿ ಬೇಯಿಸಿದ ಇಡೀ ಮೊಟ್ಟೆ ಕೇವಲ ಬಿಳಿ ಭಾಗವನ್ನಷ್ಟೇ ಹೊಂದಿದ್ದು ಅಚ್ಚರಿ ಮೂಡಿಸಿದೆ.
ಗಂಗೊಳ್ಳಿಯ ಲೈಟ್‌ಹೌಸ್ ನಿವಾಸಿ ವಿಶ್ವನಾಥ ಗಂಗೊಳ್ಳಿ ಅವರ ಅಂಗಡಿಯಲ್ಲಿ ಬೇಯಿಸಿದ ಮೊಟ್ಟೆಯನ್ನು ಸಿಪ್ಪೆಯನ್ನು ತೆಗೆದು ಗ್ರಾಹಕರಿಗೆ ನೀಡುವಾಗ ಈ ವಿಸ್ಮಯ ಬಯಲಾಗಿದೆ. ಬೆಂದ ಮೊಟ್ಟೆಯನ್ನು ಸೀಳಿದಾಗ ಮೊಟ್ಟೆಯ ಮಧ್ಯದಲ್ಲಿ ಹಳದಿ ಬಣ್ಣದ ಕೊಬ್ಬಿನಾಂಶ ಇರಲಿಲ್ಲ. ಅದಕ್ಕಾಗಿ ಮೊಟ್ಟೆಯನ್ನು ನಾಲ್ಕು ತುಂಡು ಮಾಡಿ ನೋಡಿದರೂ ಹಳದಿ ಭಾಗ ಕಾಣಿಸಲೇ ಇಲ್ಲ.
ಪ್ಲಾಸ್ಟಿಕ್ ಮೊಟ್ಟೆಯ ಶಂಕೆ!
ಕೆಲ ವರ್ಷಗಳ ಹಿಂದೆ ದೇಶದೆಲ್ಲೆಡೆ ಪ್ಲಾಸ್ಟಿಕ್ ಮೊಟ್ಟೆಯ ವಿಚಾರ ತೀವ್ರ ಚರ್ಚೆಗೀಡಾಗಿತ್ತು. ಇಲ್ಲಿ ಮೊಟ್ಟೆಯ ಮಧ್ಯೆ ಕೊಬ್ಬಿನಾಂಶ ಇಲ್ಲದಿರುವುದು ಕೂಡ ಪ್ಲಾಸ್ಟಿಕ್ ಮೊಟ್ಟೆಯ ಶಂಕೆಯನ್ನು ಮೂಡಿಸಿತ್ತು. ಅದಕ್ಕಾಗಿ ಸಂಶಯ ನಿವಾರಿಸಲು ಮೊಟ್ಟೆಯ ಚಿಕ್ಕ ತುಂಡನ್ನು ಬೆಂಕಿಯಲ್ಲಿ ಸುಟ್ಟು ನೋಡಲಾಯಿತು. ಅಲ್ಲದೇ ಅದರ ರುಚಿಯನ್ನೂ ಪರೀಕ್ಷಿಸಲಾಯಿತು. ಕೊನೆಗೂ ಬೇಯಿಸಿದ್ದು ಸಾಮಾನ್ಯ ಕೋಳಿ ಮೊಟ್ಟೆಯೇ ಎಂದು ದೃಢಪಟ್ಟರೂ ಮೊಟ್ಟೆಯ ಮಧ್ಯೆ ಹಳದಿ ಕೊಬ್ಬಿನಾಂಶ ಯಾಕಿಲ್ಲ? ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ಪ್ರಕೃತಿಯ ವಿಸ್ಮಯಗಳಿಗೆ ಮಿತಿಯಿಲ್ಲ. ಅವುಗಳು ಜನಸಾಮಾನ್ಯರ ಗೋಚರಕ್ಕೆ ಬರುವಾಗ ಆಗುವಂತಹ ಅನುಭವ ಅಷ್ಟೇ ಆಶ್ಚರ್ಯಕರ ಮತ್ತು ಕುತೂಹಲಕಾರಿ. ಅಂತಹ ಅನುಭವ ಗಂಗೊಳ್ಳಿಯ ಕೆಲವರಿಗೆ ಆಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss