Wednesday, August 10, 2022

Latest Posts

ಗಂಜಿಗಟ್ಟಿಗೆ ಸಚಿವ ಜಗದೀಶ ಶೆಟ್ಟರ್ ಭೇಟಿ: ಹಿರೆಕೇರೆ ಸೇತುವೆ ನಿರ್ಮಾಣಕ್ಕೆ ಸೂಚನೆ

ಧಾರವಾಡ: ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದ ಹಿರೇಕೆರೆ ನೀರಿನ ಸೆಳವಿನಲ್ಲಿ ತೇಲಿಹೋಗಿ ಮೃತಪಟ್ಟ ಬಾಲಕಿ ಶ್ರೀದೇವಿ ಹನುಮಂತಪ್ಪ ಗಾಣಿಗೇರ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಸೋಮವಾರ ಭೇಟಿನೀಡಿ, ಸಾಂತ್ವನ ಹೇಳಿದರು.
ಗಂಜಿಗಟ್ಟಿ ಕಲಘಟಗಿ ಮಧ್ಯೆ ಲೋಕೊಪಯೋಗಿ ರಸ್ತೆ, ಸೇತುವ ದುರಸ್ತಿಗೆ ಕ್ರಮ ಕೈಗೊಳ್ಳಲು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚಿಸಿದರು.
ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಜಿಲ್ಲಾಧಿಕಾರಿ ನಿತೇಶ ಕೆ ಪಾಟೀಲ, ಲೋಕೋಪಯೋಗಿ ಅಭಿಯಂತರ ಚೌಡಣ್ಣವರ, ತಹಸೀಲ್ದಾರ ಅಶೋಕ ಶಿಗ್ಗಾಂವಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss