Wednesday, June 29, 2022

Latest Posts

ಗಂಡು ಮಗುವಿಗೆ ಜನ್ಮ ನೀಡಿದ ಖ್ಯಾತ ಸೀರಿಯಲ್ ನಟಿ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಖ್ಯಾತ ಸೀರಿಯಲ್ ನಟಿ ಅನಿತಾ ಹಸನಂದಾನಿ ತಾಯಿ ಆಗಿದ್ದಾರೆ.
ಮೆಟರ್ನಿಟಿ ಫೋಟೊ ಶೂಟ್‌ಗಳಿಂದ ಫೇಮಸ್ ಆಗಿದ್ದ ಅನಿತಾ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ನಿನ್ನೆ ಸಂಜೆ ಅನಿತಾ ಪತಿ ರೋಹಿತ್ ರೆಡ್ಡಿ ಹಾಗೂ ಫಿಲ್ಮ್ ಮೇಕರ್ ಏಕ್ತಾ ಕಪೂರ್ ಈ ಸಿಹಿಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

 ನಟಿ ಅನಿತಾ ಹಸ್ಸನಂದನಿ  (Image: Instagram)ಪುನೀತ್ ರಾಜ್‌ಕುಮಾರ್ ಅವರ ಜೊತೆ ವೀರ ಕನ್ನಡಿಗ ಚಿತ್ರದಲ್ಲಿ ಅನಿತಾ ನಾಯಕಿಯಾಗಿ ಅಭಿನಯಿಸಿದ್ದು, ಹೆಚ್ಚಾಗಿ ಹಿಂದಿ ಸೀರಿಯಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೊ ಶೂಟ್‌ಗಳು ವೈರಲ್ ಆಗಿದ್ದು, ಅನಿತಾ ತಮ್ಮ ಕ್ರಿಯೇಟೀವ್ ಶೂಟ್‌ನಿಂದಲೇ ಫೇಮಸ್ ಆಗಿದ್ದರು. ಇವರ ಕುಟುಂಬ ಸುಖವಾಗಿರಲಿ, ಹಾಗೂ ಮಗುವಿನ ಆರೋಗ್ಯ ಚೆನ್ನಾಗಿರಲಿ ಎಂದು ಬಾಲಿವುಡ್ ಮಂದಿ ಹಾರೈಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss