Thursday, June 30, 2022

Latest Posts

ಗಂಭೀರ್ ಆರಂಭಿಸಿದ್ದಾರೆ ‘ಜನ್ ರಸೋಯಿ’ ಕ್ಯಾಂಟೀನ್: ಇಲ್ಲಿ 1 ರೂ.ಗೆ ಹೊಟ್ಟೆ ತುಂಬ ಊಟ!!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇನ್ನು ಮುಂದೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಡವರಿಗೆ 1 ರೂಪಾಯಿ ಊಟ ಸಿಗಲಿದೆ.

ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು 1 ರೂಪಾಯಿಗೆ ಊಟ ಕೊಡುವ ಕ್ಯಾಂಟಿನ್ ಒಂದನ್ನು ಆರಂಭಿಸಿದ್ದು, ಗುರವಾರ “ಏಕ್ ಆಶಾ… ಜನ್ ರಸೋಯಿ” ಹೆಸರಿನ ಸಮುದಾಯ ಅಡುಗೆ ಮನೆ ಯೋಜನೆಯನ್ನು ಗಾಂಧಿನಗರ ಪ್ರದೇಶದಲ್ಲಿ ಉದ್ಘಾಟಿಸಿದ್ದಾರೆ. ಇಲ್ಲಿ ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯವರೆಗೆ ಊಟ ಸಿಗಲಿದೆ.

ಯಾರೂ ಖಾಲಿ ಹೊಟ್ಟೆಯಲ್ಲಿ ನಿದ್ರಿಸಬಾರದು ಎಂಬುದು ಯೋಜನೆಯ ಉದ್ದೇಶ, ಸದ್ಯದಲ್ಲಿಯೇ ದೆಹಲಿಯ 5-6 ಕಡೆಗಳಲ್ಲಿ ಇಂತಹ ಕ್ಯಾಂಟಿನ್ ಆರಂಭಗೊಳ್ಳಲಿದೆ ಎಂದು ಗಂಭೀರ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss