Wednesday, August 10, 2022

Latest Posts

ಗಗನಕ್ಕೆ ಚಿಮ್ಮಿತು ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರು ಹೊತ್ತಿರುವ ಅಮೆರಿಕನ್ ಗಗನನೌಕೆ

ವಾಲೋಪ್ಸ್ ದ್ವೀಪ: ಭಾರತೀಯ ಮೂಲದ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರು ಹೊತ್ತಿರುವ ಅಮೆರಿಕದ ನಾರ್ತ್ ರೋಪ್ ಗ್ರುಮನ್ ಕಾರ್ಪೊರೇಷನ್ ನ ಸೈನಸ್ ಗಗನನೌಕೆ ಯಶಸ್ವಿಯಾಗಿ ಗಗನಕ್ಕೇರಿದೆ.
ಈ ಗಗನ ನೌಕೆಯನ್ನು ವರ್ಜಿನಿಯಾದ ನಾಸಾ ವಾಲೋಪ್ಸ್ ಬಾಹ್ಯಾಕಾಶ ಕೇಂದ್ರದ ಮಧ್ಯ-ಅಟ್ಲಾಂಟಿಕ್ ಪ್ರಾದೇಶಿಕ ಬಾಹ್ಯಾಕಾಶ ನಿಲ್ದಾಣ(ಮಾರ್ಸ್)ನಿಂದ ಉಡಾಯಿಸಲಾಗಿದೆ. ಭಾರತೀಯ ಕಾಲಮಾನ ಕಳೆದ ರಾತ್ರಿ 9.38ಕ್ಕೆ ಗಗನಕ್ಕೇರಿರುವ ಈ ನೌಕೆ, ಎರಡು ದಿನಗಳ ಹಾರಾಟದ ನಂತರ ಬಾಹ್ಯಾಕಾಶ ಕೇಂದ್ರಕ್ಕೆ ಸೇರ್ಪಡೆಯಾಗಲಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸರಕುಗಳನ್ನು ಹೊತ್ತೊಯ್ಯುವ ಈ ನೌಕೆ ಬರೋಬ್ಬರಿ 3630 ಕೆ.ಜಿ ತೂಕ ಹೊಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss