ನವದೆಹಲಿ: ಗಡಿಯಲ್ಲಿ ಉದ್ಭವಿಸಬಹುದಾದ ಯಾವುದೇ ಸ್ಥಿತಿಯನ್ನು ಎದುರಿಸಲು ನಮ್ಮ ಸೇನಾ ಪಡೆಗಳು ಸಿದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಗಡಿಯಲ್ಲಿನ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವುದು ಸ್ವೀಕಾರಾರ್ಹವಲ್ಲ ಎನ್ನುವುದನ್ನು ಈಗಾಗಲೇ ಚೀನಾಗೆ ಸ್ಪಷ್ವಾಗಿ ತಿಳಿಸಲಾಗಿದೆ.
ಮುಂಬರುವ ಚಳಿಗಾಲದ ಸಂದರ್ಭದಲ್ಲಿ ದೇಶದ ರಕ್ಷಣೆಗಾಗಿ ಲಡಾಕ್ನ ಉನ್ನತ ಪ್ರದೇಶಗಳಲ್ಲಿ ಉಳಿದುಕೊಳ್ಳಲು ಸೇನೆ ಸನ್ನದ್ಧವಾಗಿದೆ ಎಂದಿದ್ದಾರೆ. ಆ ಸಮಯದಲ್ಲಿ ವಿಪರೀತ ಚಳಿ ಇರಲಿದ್ದು, ಅದನ್ನು ಎದುರಿಸಲು ಬೇಕಾದ ಸೌಲಭ್ಯ ಮಾಡಲಾಗಿದೆ ಎಂದಿದ್ದಾರೆ.
ಭಾರತ ಗಡಿಯಲ್ಲಿ ಕೆಲವು ಸವಾಲುಗಳನ್ನು ಎದುರಿಸುತ್ತಿದೆ ಎನ್ನಲು ಹಿಂಜರಿಕೆಯಿಲ್ಲ ಎಂತಹ ಸವಾಲುಗಳನ್ನಾದರೂ ಎದುರಿಸುವ ಶಕ್ತಿ ಸಾಮರ್ಥ್ಯ ನಮ್ಮಲ್ಲಿದೆ. ಸೇನೆಯ ಮೇಲೆ ವಿಶ್ವಾಸವಿಡಬೇಕು ಎಂದಿದ್ದಾರೆ.